ಓದು ಎಷ್ಟು ಮುಖ್ಯವೋ ಅಷ್ಟೇ ಕ್ರೀಡೆಯು ಮುಖ್ಯ- ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಆರ್.ಪ್ರಭಾಕರ್

634
FIRSTSUDDI

ಕಳಸ:ಮಕ್ಕಳು ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ಮಾನಸಿಕ ಹಾಗೂ ದೈಹಿಕ ಸ್ವಾಸ್ಥ್ಯ ದೊರೆತು ಆರೋಗ್ಯ ಪೂರ್ಣ ಸಮಾಜವಾಗಲು ಸಾಧ್ಯವಾಗುತ್ತದೆ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಆರ್.ಪ್ರಭಾಕರ್ ಹೇಳಿದರು.
ಇಲ್ಲಿಯ ಜ್ಯೂನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ಶನಿವಾರ ನಡೆದ ಸಂಸೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆತಿಥ್ಯದ ಹೋಬಳಿಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು ಕ್ರೀಡೆಯಲ್ಲಿ ಸೋಲು ಗೆಲುವುಗಳು ಅನಿವಾರ್ಯ ಆದರೆ ಅದರಲ್ಲಿ ಭಾಗವಹಿಸುವುದು ಮುಖ್ಯ.ಮಕ್ಕಳಿಗೆ ಓದು ಎಷ್ಟು ಮುಖ್ಯವೋ ಅಷ್ಟೇ ಕ್ರೀಡೆಯು ಮುಖ್ಯವಾಗಿರುತ್ತದೆ.ಆರೋಗ್ಯವಂತರಾಗಿರಲು ಮತ್ತು ಮಾನಸೀಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಕ್ರೀಡೆ ಅತ್ಯವಶ್ಯಕ.ಆದರೆ ಈ ಕ್ರೀಡಾಕೂಟಗಳನ್ನು ನಡೆಸಲು ಇಲಾಖೆ ನೀಡುವ ಅನುದಾನ ಸಾಕಾಗುವುದಿಲ್ಲ.ಈ ಬಗ್ಗೆ ಸಾಕಷ್ಟು ಬಾರಿ ಜಿ.ಪಂ ಸಭೆಯಲ್ಲಿ ಚರ್ಚಿಸಿದ್ದೇನೆ.ಈ ಅನುದಾನವನ್ನು ಹೆಚ್ಚಿಸಿ ಮಕ್ಕಳನ್ನು ಕ್ರೀಡೆಗಳಲ್ಲಿ ಬಾಗವಹಿಸಲು ಹೆಚ್ಚಿನ ಸಹಕಾರವನ್ನು ನೀಡಬೇಕಾಗಿದೆ ಎಂದರು.
ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಎ.ಶೇಷಗಿರಿ ಮಾತನಾಡಿ ಹಿಂದೆ ಮಕ್ಕಳು ಶಾಲೆಯಿಂದ ಮನೆಗೆ ಬಂದು ಆಟವಾಡುತ್ತಿದ್ದರು.ಶಾಲೆಗಳಲ್ಲೂ ಹೆಚ್ಚಾಗಿ ಮಕ್ಕಳನ್ನು ಆಟವಾಡಿಸುತ್ತಿದ್ದರು.ಆದರೆ ಇವತ್ತು ಮನೆಗೆ ಬಂದ ಮಕ್ಕಳು ಮೊಬೈಲ್ ಹಿಡಿದುಕೊಂಡು ಅದರಲ್ಲಿ ಆಟವಾಡುತ್ತಿದ್ದಾರೆ.ಇದರಿಂದ ಮಕ್ಕಳ ಕ್ರಿಯಾಶೀಲತೆ ಕಳೆದುಕೊಳ್ಳುತ್ತಿದ್ದಾರೆ.ಪಾಠದ ಜೊತೆ ಕ್ರೀಡೆನೂ ಬೆಳೆಸಿಕೊಂಡು ಭವಿಷ್ಯ ರೂಪಿಸಿಕೊಳ್ಳಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸೆ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಪುಟ್ಟ,ತಾಲ್ಲೂಕು ಸ್ಥಾಯಿ ಸಮಿತಿ ಸದಸ್ಯೆ ಮೀನಾಕ್ಷಿ ಮೋಹನ್,ಮಾಜಿ.ಜಿ.ಪಂ ಸದಸ್ಯೆ ಆಶಾಲತಾ ಜೈನ್,ಶಿಕ್ಷಣಾಧಿಕಾರಿ ತಾರನಾಥ್,ಸಂಸೆ ಗ್ರಾ.ಪಂ ಅಧ್ಯಕ್ಷೆ ಹೇಮಲತಾ,ಕಳಸ ಗ್ರಾ.ಪಂ ಅಧ್ಯಕ್ಷೆ ರತೀರವೀಂದ್ರ,ಮಮತಾ,ಬಿ,ಕೆ.ಮಹೇಶ್,ಪ್ರೇಮ,ಯೋಗೇಶಪ್ಪ,ಮೋಹನ್,ಪುಟ್ಟರಾಜು,ಮಂಜಪ್ಪ,ಮುಕ್ಕುಂದ ಕಿಶೋರ್,ಶಿವಪ್ಪ,ದಿನೇಶ್,ರಘುನಾಥ್,ಮಲ್ಲಿಕಾರ್ಜುನ್,ಪದ್ಮಲತಾ ಇತರರು ಇದ್ದರು.