ಓಮಿಕ್ರಾನ್ ನಾವು ಅಂದುಕೊಂಡಷ್ಟು ಸೌಮ್ಯವಾಗಿಲ್ಲ : ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ಸಂದೇಶ…

67
firstsuddi

ನವದೆಹಲಿ : ಕೊರೊನಾದ ಎಲ್ಲ ಹೊಸ ತಳಿಗಳಂತೆ ಓಮಿಕ್ರಾನ್ ಕೂಡ ಒಂದು ಎಂದು ಭಾವಿಸಲಾಗಿದೆ. ಆದರೆ, ಓಮಿಕ್ರಾನ್ ವೈರಸ್ ನಾವು ಅಂದುಕೊಂಡಷ್ಟು ಸೌಮ್ಯವಾಗಿಲ್ಲ. ಇದು ಮುಂದಿನ ದಿನಗಳಲ್ಲಿ ಸಾವು, ಸೋಂಕಿನ ವ್ಯಾಪಕತೆ ಹೆಚ್ಚಿಸಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ಸಂದೇಶ ನೀಡಿದೆ.

ಓಮಿಕ್ರಾನ್ ಸದ್ದಿಲ್ಲದೇ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಹರಡುತ್ತಿದೆ. ಇದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಈ ವೈರಸ್ ಬಗೆಗಿನ ತಾತ್ಸಾರ ಹೀಗೇಯೇ ಮುಂದುವರಿದಲ್ಲಿ ಆಸ್ಪತ್ರೆಗೆ ದಾಖಲು ಪ್ರಮಾಣ ಮತ್ತು ಸಾವಿನ ಸಂಖ್ಯೆ ಉಲ್ಬಣಗೊಳ್ಳಲಿದೆ. ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ಕ್ರಮ ವಹಿಸಲೇಬೇಕು. ಸೋಂಕಿನ ವಿರುದ್ಧ ಹೋರಾಡಲು ನಮಗಿರುವ ಒಂದೇ ಹಾದಿಯಾದ ಲಸಿಕೆಯನ್ನು ಮತ್ತಷ್ಟು ಪ್ರಮಾಣದಲ್ಲಿ ಹೆಚ್ಚಿಸಬೇಕು ಎಂದು ಡಬ್ಲ್ಯೂಎಚ್ಒ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ತಿಳಿಸಿದ್ದಾರೆ.