ಕಂಟ್ರಾಕ್ಟರ್, ಎಂಜಿನಿಯರ್ ಗಳ ಮನೆ ಮೇಲೆ ದಾಳಿ ಮಾಡಿದರೆ ರಾಜಕಾರಣಿಗಳಿಗೆ ಯಾಕೆ ಹೊಟ್ಟೆ ನೋವು ಬಂತೋ ನನಗೆ ಗೊತ್ತಿಲ್ಲ : ಎಸ್ ಎಂ ಕೃಷ್ಣ

198
firstsuddi

ಹಾಸನ : ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರು ಹಾಸನ, ಮಂಡ್ಯದಲ್ಲಿ ಐಟಿ ದಾಳಿ ನಡೆದ ವಿಚಾರವಾಗಿ ಕಂಟ್ರಾಕ್ಟರ್, ಎಂಜಿನಿಯರ್ ಗಳ ಮನೆ ಮೇಲೆ ದಾಳಿ ಮಾಡಿದರೆ ರಾಜಕಾರಣಿಗಳಿಗೆ ಯಾಕೆ ಹೊಟ್ಟೆ ನೋವು ಬಂತೋ ನನಗೆ ಗೊತ್ತಿಲ್ಲ. ಎಂಜಿನಿಯರ್ ಗಳು, ಕಂಡ್ರಾಕ್ಟರ್ ಗಳಿಗೆ ಆರ್ಥಿಕವಾಗಿ ಶಕ್ತಿಯಿದೆ ಅವರು ಎದುರಿಸುತ್ತಾರೆ. ಹಾಗಾಗಿ ಇವರು ನಿರಾಳವಾಗಿರಬಹುದು. ಆದರೆ ಮೋದಿಯವರು ಮುಂದುವರಿಯುವುದರಲ್ಲಿ ಯಾವುದೇ ರೀತಿಯ ಸಂದೇಹವಿಲ್ಲ. ಘಟಬಂದನ್ನೇ ಇಲ್ಲ ಇನ್ನು ಮಹಾಘಟಬಂಧನ್ ಎಲ್ಲಿದೆ. ಉತ್ತರಪ್ರದೇಶದಲ್ಲಿ ಮಹಾಘಟಬಂಧನ್ ಮಾಡಿಕೊಂಡಿರುವ ಎಸ್ಪಿ, ಬಿಎಸ್ಪಿ ಪಕ್ಷಗಳು ಕಾಂಗ್ರೆಸ್ ಗೆ ಕೇವಲ ಎರಡು ಸ್ಥಾಗಳನ್ನು ಬಿಟ್ಟುಕೊಟ್ಟಿವೆ. ಅಲೆಯನ್ಸ್ ಮಾಡಿಕೊಳ್ಳುವುದಿಲ್ಲ ಎಂದು ಮಾಯಾವತಿಯವರು ಸಾರಿ ಸಾರಿ ಹೇಳಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಮುಕ್ತವಾದ ಅಲೆಯನ್ಸ್ ಅಲ್ಲಲ್ಲೇ ನಡೀತಾ ಇದೆ. ಕಾಂಗ್ರೆಸ್ ನವರ ಏಕಾಂಗಿತನ ಬಹಳ ಎದ್ದು ಕಾಣುತ್ತಿದೆ. ಮೋದಿಯವರೆಲ್ಲಿ, ಈ ಮಹಾಘಟಬಂಧನ್ ಗಳೆಲ್ಲಿ, ಮೋದಿಯವರ ವರ್ಚಸ್ಸೇನು, ಮೋದಿಯವರ ವ್ಯಕ್ತಿತ್ವವೇನು ಎಂದು ಮಹಾಘಟಬಂಧನ್ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯ ಸರ್ಕಾರದ ವೈಖರಿಯ ಬಗ್ಗೆ ಜನರು ಈ ಚುನಾವಣೆಯಲ್ಲಿಯೇ ತಿರ್ಮಾನ ಕೊಡುತ್ತಾರೆ ಎಂದು ರಾಜ್ಯಸರ್ಕಾರದ ಕಾರ್ಯವೈಖರಿಯನ್ನೂ ಟೀಕಿಸಿದ್ದಾರೆ.