ಕನಕಗಿರಿಯ ಚಿದಾನಂದ ಅವಧೂತರ ದರ್ಶನ ಪಡೆದ ಬಾಬಾ ರಾಮ್ ದೇವ್.

81
firstsuddi

ಕೊಪ್ಪಳ : ಯೋಗ ಗುರು ಬಾಬಾ ರಾಮ್ ದೇವ್ ಅವರು ನಿನ್ನೆ ರಾತ್ರಿ ಜಿಲ್ಲೆಯ ಕನಕಗಿರಿಗೆ ಭೇಟಿ ನೀಡಿ ಚಿದಾನಂದ ಅವಧೂತರ ದರ್ಶನ ಪಡೆದರು.

ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಸಿದ್ದ ಪರ್ವತ ಅಂಬಾ ಮಠಕ್ಕೂ ರಾಮದೇವ್ ಭೇಟಿ ನೀಡಿದರು. ಬಳ್ಳಾರಿಯ ಸಿರಗುಪ್ಪದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಾಬಾ ರಾಮ್ ದೇವ್ ಅವರು ತಮ್ಮ ಶಿಷ್ಯರಿಂದ ಸಿದ್ದಪರ್ವತ ಅಂಬಾದೇವಿಯ ದೇವಾಲಯದ ಬಗ್ಗೆ ಮಾಹಿತಿ ಪಡೆದಿದ್ದ ಅವರು ಮಾರ್ಗ ಮಧ್ಯೆ ಅಂಬಾಮಠಕ್ಕೆ ಭೇಟಿ ನೀಡಿದ್ದಾರೆ.