ಬೆಂಗಳೂರು : ಇಂದು 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಹಿನ್ನೆಲೆ, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ತಮ್ಮ ಟ್ವಿಟರ್ ಮೂಲಕ ಮತದಾರರಿಗೆ ಮತ ಚಲಾಯಿಸುವಂತೆ ಮನವಿ ಮಾಡಿಕೊಂಡಿದ್ದಾರೆ. “ ಕರ್ನಾಟಕ ಅಭಿವೃದ್ದಿಗಾಗಿ ಬಿಜೆಪಿಯನ್ನು ಬೆಂಬಲಿಸಿ. ನಿಮ್ಮ ಮತ ಸ್ಥಿರ ಸರ್ಕಾರಕ್ಕೆ, ನಿಮ್ಮ ಮತ ಸದೃಢ ಸರ್ಕಾರಕ್ಕೆ. ಮತದಾನ ಪ್ರತಿಯೊಬ್ಬರ ಹಕ್ಕು. ಒಂದೊಂದು ಮತವೂ ಅತ್ಯಮೂಲ್ಯ. ರಾಜ್ಯದ ಉತ್ತಮ ಪ್ರಗತಿಗಾಗಿ ತಪ್ಪದೆ ನಿಮ್ಮ ಮತ ಚಲಾಯಿಸಿ. ಬಿಜೆಪಿಗೆ ಬೆಂಬಲಿಸಿ ಎಂದು ಟ್ವೀಟ್ ಮಾಡಿದ್ದಾರೆ.










