ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣ – ಪಶ್ಚಿಮ ಬಂಗಾಳದ ಸಚಿವರ ಮನೆ ಮೇಲೆ ಸಿಬಿಐ ದಾಳಿ…

57
firstsuddi

ಕೋಲ್ಕತಾ : ಕಲ್ಲಿದ್ದಲು ಕಳ್ಳಸಾಗಣೆ ಹಗರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಕಾನೂನು ಮತ್ತು ಕಾರ್ಮಿಕ ಸಚಿವ ಮೋಲೊಯ್ ಘಾಟಕ್ ಅವರ ಹಲವು ನಿವಾಸಗಳ ಮೇಲೆ ಸಿಬಿಐ ಇಂದು ದಾಳಿ ನಡೆಸಿದೆ.

ಕೇಂದ್ರೀಯ ತನಿಖಾ ದಳದ (ಸಿಬಿಐ) ಅಧಿಕಾರಿಗಳು ಪಶ್ಚಿಮ ಬರ್ಧಮಾನ್ ಜಿಲ್ಲೆಯ ಅಸನ್ಸೋಲ್ ನಲ್ಲಿರುವ ಘಟಕ್ ಅವರ ಮೂರು ಮನೆಗಳು ಮತ್ತು ಕೋಲ್ಕತ್ತಾದ ಲೇಕ್ ಗಾರ್ಡನ್ಸ್ ಪ್ರದೇಶದ ಒಂದು ಮನೆಯ ಮೇಲೆ ದಾಳಿ ನಡೆಸಲಾಗಿದೆ.

ಕಲ್ಲಿದ್ದಲು ಕಳ್ಳಸಾಗಣೆ ಹಗರಣ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುತ್ತಿದ್ದು, ತನಿಖೆ ವೇಳೆ ಮೋಲೊಯ್ ಘಾಟಕ್ ಅವರ ಹೆಸರು ಬೆಳಕಿಗೆ ಬಂದಿತ್ತು. ಕೇಂದ್ರ ಅರೆಸೇನಾ ಪಡೆಯ ದೊಡ್ಡ ತುಕಡಿಯ ಭದ್ರತೆಯಲ್ಲಿ ತೆರಳಿರುವ ಸಿಬಿಐ ಅಧಿಕಾರಿಗಳು, ಹಗರಣಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿದ್ದಾರೆ. ಮಹಿಳಾ ಅಧಿಕಾರಿಗಳು ಕೂಡ ಈ ತಂಡದಲ್ಲಿದ್ದಾರೆ.

ಅಸನ್ಸೋಲ್ ಉತ್ತರ ಕ್ಷೇತ್ರದ ಶಾಸಕರಾಗಿರುವ ಘಾಟಕ್ ಅವರು ಈ ಹಿಂದೆ ಕಲ್ಲಿದ್ದಲು ಕಳವು ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ದಿಲ್ಲಿಯ ಜಾರಿ ನಿರ್ದೇಶನಾಲಯದ ಕಚೇರಿಗೆ ಹಾಜರಾಗಿದ್ದರು. ಆದಾಗ್ಯೂ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ನೀಡಿದ ಹಲವಾರು ಸಮನ್ಸ್  ಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹಲವು ಸಮನ್ಸ್ ಗಳನ್ನು ನೀಡಿದ್ದರೂ ಹಾಜರಾಗದ ಕಾರಣ ಘಾಟಕ್ ಅವರ ಮೇಲೆ ಸಿಬಿಐ ದಾಳಿ ನಡೆಸಿದೆ.