ಕಳಸ : ತಾಲ್ಲೂಕು ಕೇಂದ್ರದ ಕಾರ್ಯಾರಂಭ ಮಾಡುವುದು ನಮ್ಮ ಕರ್ತವ್ಯ. ಅದನ್ನು ಆದಷ್ಟು ಬೇಗ ಮಾಡಲಿದ್ದೇವೆ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಅವರು ಹೇಳಿದರು.
ಇಂದು ಪಟ್ಟಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ಧಿಗಾರರೊಂದಿಗೆ ಮತನಾಡಿದ ಅವರು ತಾಲ್ಲೂಕು ಕೇಂದ್ರದ ಕಾರ್ಯಾರಂಭ ಸ್ವಲ್ಪ ತಡವಾಗಿರಬಹುದು ಆದರೆ ಖಂಡಿತಾವಾಗಿಯೂ ಮಾಡುತ್ತೇವೆ ಇದರ ಬಗ್ಗೆ ಈಗಾಗಲೇ ನಾನು, ಪ್ರಾಣೇಶ್, ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳ ಬಳಿ ಪ್ರಸ್ತಾಪವನ್ನು ಮಾಡಿದ್ದಾರೆ. ಇದಕ್ಕೆ ಮುಖ್ಯಮಂತ್ರಿಗಳು ಸಕರಾತ್ಮಕ ರೀತಿಯಲ್ಲಿ ಸ್ಪಂಧಿಸಿದ್ದಾರೆ. ಆದ್ದರಿಂದ ಈ ಬಗ್ಗೆ ಯಾರೀಗೂ ಗೊಂದಲಗಳು ಬೇಡ ಎಂದು ಹೇಳಿದ ಅವರು ಇನಾಂ ಭೂಮಿ ಸಮಸ್ಯೆ ಈಗಾಗಲೇ ಸುಪ್ರೀಂ ಕೋರ್ಟ್ ನಲ್ಲಿದೆ. ಇದಕ್ಕೆ ರಾಜ್ಯ ಸರ್ಕಾರದಿಂದ ಅಫಿಡಾವಿಟ್ ಹಾಕಲಾಗುತ್ತದೆ. ಕಸ್ತೂರಿ ರಂಗನ್ ವರಧಿಯನ್ನು ರಾಜ್ಯ ಸರ್ಕಾರ ತಿರಸ್ಕಾರ ಮಾಡಿದೆ. ಕೇಂದ್ರ ಯಾವ ರೀತಿ ನಡೆದುಕೊಳ್ಳುತ್ತೋ ಅದರ ಮೇಲೆ ನಿರ್ದಾರ ಆಗುತ್ತದೆ. ರೈತರಿಗಂತೂ ಯಾವುದೇ ರೀತಿಯ ತೊಂದರೆ ಆಗೋದಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸ್ಥಳಿಯ ಬಿಜೆಪಿ ಮುಖಂಡರು ಕಳಸ ತಾಲ್ಲೂಕು ಶೀಘ್ರವಾಗಿ ಕಾರ್ಯಾರಂಭ ಮಾಡುವಂತೆ ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಎ.ಶೇಷಗಿರಿ, ಮುಖಂಡರುಗಳಾದ ವೆಂಕಟಸುಬ್ಬಯ್ಯ, ಕಾರ್ತಿಕ್ ಶಾಸ್ತ್ರೀ, ನಾಗೇಶ್ ಭಟ್, ಕೃಷ್ಣಪ್ಪ, ಸುಜಯ, ಅಚ್ಚುತ್ತ ಹೆಗ್ಡೆ ಇದ್ದರು.










