ಕಳಸ : ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ನಡೆದ ಅಗಲಿದ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ನುಡಿ ನಮನ…

324
firstsuddi

ಕಳಸ : ಎಸ್.ಪಿ. ಬಾಲಸುಬ್ರಹ್ಮಣ್ಯಂ ದೇಶದ ಬಹುತೇಕ ಬಾಷೆಗಳನ್ನು ಕರಗತ ಮಾಡಿಕೊಂಡು, ಆಯಾ ಬಾಷೆಗಳನ್ನು ಅರ್ಥ ಮಾಡಿಕೊಂಡು ಹಾಡುವುದರ ಮೂಲಕ ಜನರ ಮೆಚ್ಚಿನ ಗಾಯಕರಾಗಿದ್ದರು ಎಂದು ಉದ್ಯಮಿ ಬಿ.ವಿ ರವಿ ರೈ ಹೇಳಿದರು.

ಪಟ್ಟಣದ ಆಶೀರ್ವಾದ್ ಕಂಫಟ್ರ್ಸ್ ನಲ್ಲಿ ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ನಡೆದ ಅಗಲಿದ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ನುಡಿ ನಮನ, ಗಾನ ನಮನ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪುಷ್ಪಗಿರಿ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಡಾ.ಮೋಹನ್ ರಾಜಣ್ಣ ಮಾತನಾಡಿ ಮಧುರ ಕಂಠದ ಮೂಲಕ ಸಂಗೀತ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಎಸ್.ಪಿ.ಬಿಯವರನ್ನು ಕಳೆದುಕೊಂಡಿರುವುದು ಸಾಂಸ್ಕೃತಿಕ ಲೋಕಕ್ಕೆ ತುಂಬಲಾಗದ ನಷ್ಟವಾಗಿದೆ. ಎಸ್.ಪಿ.ಬಿಯವರಿಗೆ ರಾಷ್ಟ್ರದ ಅತ್ಯುನ್ನತ ನಾಗರೀಕ ಪ್ರಶಸ್ತಿ ಮರಣೋತ್ತರವಾಗಿ ಭಾರತ ರತ್ನವನ್ನು ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಗಾಯಕರಾದ ಬಕ್ಕಿ ಮಂಜುನಾಥ್, ಸಚಿನ್, ಕವನ, ರಾಕೇಶ್ ಸಿಂಗ್ ಹಾಡುವ ಮುಖಾಂತರ ಗಾನ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜನಪದ ಪರಿಷತ್ ಅಧ್ಯಕ್ಷ ಅರುಣ್ ಕುಮಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ನಾಗರಾಜ್, ಕಲಾವಿದ ಸುರೇಶ್ ಇತರರು ಇದ್ದರು.