ಕಳೆದ ಒಂದು ವರ್ಷದಿಂದ ರಾಜ್ಯ ಸರ್ಕಾರದಲ್ಲಿ ಅಭಿವೃದ್ದಿಯ ಕೆಲಸಗಳು ಆಗುತ್ತಿಲ್ಲ : ಸೌಮ್ಯಾ ರೆಡ್ಡಿ…

223
firstsuddi

ಬೆಂಗಳೂರು : ಸುದ್ದಿಗಾರರೊಂದಿಗೆ ಮಾತನಾಡಿದ ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಅವರು ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ನಾನು ಎಲ್ಲರ ಬಳಿ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇನೆ. ರಾಜೀನಾಮೆ ನೀಡುವುದಾದರೆ ನಾನು ನಿಮಗೆ ತಿಳಿಸುತ್ತೇನೆ. ತಮ್ಮ ತಂದೆ ರಾಜೀನಾಮೆ ನೀಡಿರುವ ವಿಷಯಕ್ಕೆಸಂಬಂಧಿಸಿದಂತೆ ಮಾತನಾಡಿದ ಅವರು ನನ್ನ ತಂದೆಗೆ ತುಂಬಾ ನೋವಾಗಿದೆ. ಅವರು ಯಾವಾ ಕಾರಣಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ ಎಂಬುವುದು ಎಲ್ಲರಿಗೂ ಗೊತ್ತು. ಆದರೆ ಈಗಾ ತಮ್ಮ ಶಾಸಕ ಸ್ಥಾನಕ್ಕೆ ಯಾಕೆ ರಾಜೀನಾಮೆ ನೀಡಿದ್ದಾರೆ ಎಂದು ನನಗೆ ಗೊತ್ತಿಲ್ಲ. ನನ್ನ ತಂದೆ 40 ವರ್ಷ ಪಕ್ಷ ಕಟ್ಟಿ ಪಕ್ಷಕ್ಕಾಗಿ ದುಡಿದಿದ್ದಾರೆ. ಆದರೆ ಕಳೆದ ಒಂದು ವರ್ಷದಿಂದ ಸರ್ಕಾರದಲ್ಲಿ ಅಭಿವೃದ್ದಿಯ ಕೆಲಸಗಳು ಆಗುತ್ತಿಲ್ಲ. ನಾನು ಅಖಿಲ ಭಾರತ ಮಹಿಳೆ ಕಾಂಗ್ರೆಸ್ ಘಟಕದ ಕಾರ್ಯದರ್ಶಿಯಾಗಿದ್ದು, ನಾನು ಒಂದು ಬಾರಿಯೂ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿರಲಿಲ್ಲ. ಹೀಗಾಗಿ ಅವರನ್ನು ಭೇಟಿಯಾಗಿ ಸರ್ಕಾರವನ್ನು ಉಳಿಸಿಕೊಳ್ಳುವಂತೆ ಅವರಲ್ಲಿ ಮನವಿ ಮಾಡಿ ಬಂದಿದ್ದೇನೆ ಎಂದು ಹೇಳಿದ್ದಾರೆ.