ಚಿತ್ರದುರ್ಗ : ಕಳ್ಳರಿಂದ ಚಿನ್ನ ಖರೀದಿಸಿರುವ ಆರೋಪದ ಮೇಲೆ ಚಿನ್ನದಂಗಡಿಯ ವ್ಯಾಪಾರಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಜಿಲ್ಲೆಯ ಹಿರಿಯೂರು ಪಟ್ಟಣದಲ್ಲಿರುವ ವಾಸವಿ ಜ್ಯೂವೆಲರ್ಸ್ ಮಾಲೀಕನ ಪುತ್ರ ವಿನಯ್ ಎಂಬ ವ್ಯಾಪಾರಿ ಬೆಂಗಳೂರು ಸೇರಿದಂತೆ ವಿವಿಧೆಡೆಗಳಲ್ಲಿ ಕಳ್ಳರು ಕದ್ದ ಚಿನ್ನವನ್ನು ಖರೀದಿಸಿರುವ ಆರೋಪ ಕೇಳಿಬಂದಿದ್ದು, ಇಂದು ಖಚಿತ ಮಾಹಿತಿ ಮೇರೆಗೆ ಬೆಂಗಳೂರಿನಿಂದ ಹಿರಿಯೂರಿಗೆ ಆಗಮಿಸಿದ್ದ ಸಿಸಿಬಿ ಪೊಲೀಸರು ಏಕಾಏಕಿ ವಾಸವಿ ಜ್ಯೂವೆಲ್ಲರಿ ಮೇಲೆ ದಾಳಿ ನಡೆಸಿದ್ದು, ಚಿನ್ನದ ಅಂಗಡಿಯಲ್ಲಿದ್ದ ವಿನಯ್ ನನ್ನು ಬಂಧಿಸಲು ಮುಂದಾದಾಗ ಆರೋಪಿ ವಿನಯ್ ಪೊಲೀಸರ ಕಾರನ್ನು ಹತ್ತಲು ಹೈಡ್ರಾಮಾ ಮಾಡಿದ್ದಾನೆ. ಆದರೆ ಇದ್ಯಾವುದನ್ನು ಲೆಕ್ಕಿಸದೇ ಪೊಲೀಸರು ಅತನನ್ನು ಬಂಧಿಸಿ ಹೆಚ್ಚಿನ ತನಿಖೆಗಾಗಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ.










