ವಿಜಯಪುರ : ಜೂನ್ 23 ರಂದು ನಡೆದ ಕಾರಹುಣ್ಣಿಮೆ ಕರಿ ಹರಿಯುವ ಜಾತ್ರೆಯಲ್ಲಿ ಎತ್ತು ಗುದ್ದಿ ವ್ಯಕ್ತಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಕಾಖಂಡಕಿ ಗ್ರಾಮದಲ್ಲಿ ನಡೆದಿದೆ. ಬಲಭೀಮ ಮೈಲಾರಿ ಪೋಳ(41) ಮೃತ ದುರ್ದೈವಿ. ಉತ್ತರ ಕರ್ನಾಟಕದಲ್ಲಿ ಕಾರ ಹುಣ್ಣಿಮೆಯಂದು ಭಯಾನಕವಾಗಿ ನಡೆಯುವ ಕರಿ ಹರಿಯುವ ಜಾತ್ರೆಯಲ್ಲಿ ಎತ್ತುಗಳನ್ನು ರೊಚ್ಚಿಗೆಬ್ಬಿಸಿ ಓಡಿಸುವ ಪದ್ದತಿಯಿದ್ದು, ಈ ಸಂದರ್ಭದಲ್ಲಿ ಹಿಂಬದಿಯಿಂದ ಬಂದ ಎತ್ತು ಮೈಲಾರಿ ಪೋಳ ಅವರನ್ನು ಕೊಂಬಿನಿದ ಎತ್ತಿ ಬಿಸಾಕಿದ್ದು, ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.










