ಕಾವೇರಿ ಕಹಳೆ: ಶುಕ್ರವಾರ ಕರ್ನಾಟಕ ಬಂದ್- 104 ಕ್ಕೂ ಹೆಚ್ಚು ಸಂಘಟನೆಗಳಿಂದ ಬೆಂಬಲ…

67
firstsuddi

ಬೆಂಗಳೂರು: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರೋದನ್ನ ಖಂಡಿಸಿ ಕರೆ ಕೊಟ್ಟಿದ್ದ ಬೆಂಗಳೂರು ಬಂದ್ ಭಾಗಶಃ ಯಶಸ್ಸಾಗಿದೆ. ಈಗ ಮತ್ತೆ ಎರಡೇ ದಿನಗಳ ಅಂತರದಲ್ಲಿ ಕರ್ನಾಟಕ ಬಂದ್‍ಗೆ ಕರೆ ನೀಡಲಾಗಿದೆ.

ರೈತ ನಾಯಕ ಕರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಬೆಂಗಳೂರಿಗೆ ಸಂಘಟನೆಗಳು ಬೀಗ ಹಾಕಿದ್ರೆ. ಶುಕ್ರವಾರ ವಾಟಳ್ ನಾಗರಾಜ್ ಸಾರಥ್ಯದಲ್ಲಿ ಅಖಂಡ ಕರ್ನಾಟಕ ಬಂದ್‍ಗೆ ಮುಂದಾಗಿದ್ದಾರೆ. ಒಂದೇ ವಾರದಲ್ಲಿ ಕರುನಾಡ ಮಂದಿಗೆ ಮತ್ತೊಂದು ಬಂದ್ ಶಾಕ್ ಎದುರಾಗಿದೆ.

ಬೆಂಗಳೂರು ಬಂದ್‍ಗೆ ಬೆಂಬಲ ನೀಡಿದ್ದ ಕೆಲವು ಸಂಘಟನೆಗಳು ಕಡೆ ಕ್ಷಣದಲ್ಲಿ ವಾಪಾಸ್ ಪಡೆದು ಕನ್ನಡ ಒಕ್ಕೂಟ ಕರೆ ಕೊಟ್ಟಿರುವ ಕರ್ನಾಟಕ ಬಂದ್‍ಗೆ ಬೆಂಬಲವನ್ನ ಘೋಷಿಸಿದ್ವು, ಪ್ರಮುಖವಾಗಿ ಹೋಟೆಲ್ ಅಸೋಸಿಯೇಷನ್, ಖಾಸಗಿ ವಾಹನ ಮಾಲೀಕರ ಸಂಘಟನೆಗಳು, ಒಲಾ ಊಬರ್ ಸಂಘಟನೆಗಳು ಕರ್ನಾಟಕ ಬಂದ್‍ಗೆ ಸಪೋರ್ಟ್ ಮಾಡುತ್ತಿವೆ. ಈಗಾಗಲೇ 104 ಸಂಘಟನೆಗಳು ಬೆಂಬಲ ಘೋಷಿಸಿಕೊಂಡಿವೆ. ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಓಲಾ ಉಬರ್ ಚಾಲಕರ ಸಂಘ, ಆದರ್ಶ ಆಟೋ ಯೂನಿಯನ್, ಕರ್ನಾಟಕ ಕೈಗಾರಿಕೆಗಳ ಸಂಘ, ಕರ್ನಾಟಕ ರಸ್ತೆ ಸಾರಿಗೆ ಕ್ರಿಯಾ ಸಮಿತಿ, ವಿದ್ಯಾರ್ಥಿ ಸಂಘಟನೆಗಳು, ಮಾರುಕಟ್ಟೆ ಸಂಘ, ಚಲನಚಿತ್ರ ವಾಣಿಜ್ಯ ಮಂಡಳಿ, ಜಲಮಂಡಳಿ ನೌಕರರ ಸಂಘ, ಲಾರಿ ಮಾಲೀಕರ ಸಂಘ, ಹೋಟೆಲ್ ಅಸೋಸಿಯೇಷನ್ ಸೇರಿದಂತೆ ಇನ್ನೂ ಅನೇಕ ಸಂಘಟನೆಗಳು ಬೆಂಬಲ ಘೋಷಿಸಿವೆ.