ಕಿಮ್ ಜಾಂಗ್ ಇಲ್ 10ನೇ ವರ್ಷದ ಪುಣ್ಯತಿಥಿ – 11 ದಿನ ನಗುವುದನ್ನ ನಿಷೇಧಿಸಿದ ಉತ್ತರ ಕೊರಿಯಾ ಸರ್ವಾಧಿಕಾರಿ…

45
firstsuddi

ಸಿಯೋಲ್ : ಉತ್ತರ ಕೊರಿಯಾದ ಮಾಜಿ ನಾಯಕ ಕಿಮ್ ಜಾಂಗ್ ಇಲ್ 10ನೇ ವರ್ಷದ ಸ್ಮರಣಾರ್ಥ 11 ದಿನಗಳ ಕಾಲ ನಗುವುದನ್ನು ನಿಷೇಧಿಸಲಾಗಿದ್ದು, ಶೋಕಾಚರಣೆ ನಡೆಸುವಂತೆ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಖಡಕ್ ಆದೇಶ ಹೊರಡಿಸಿದ್ದಾರೆ.

ಈಶಾನ್ಯ ಗಡಿ ನಗರವಾದ ಸಿನುಯಿಜುವಿನ ಒಬ್ಬ ನಾಗರಿಕ ಈ ಕುರಿತು ರೇಡಿಯೊ ಫ್ರೀ ಏಷ್ಯಾಗೆ ಪ್ರತಿಕ್ರಿಯೆ ನೀಡಿದ್ದು, ಶೋಕ ಸಮಯದಲ್ಲಿ ನಾವು ಮದ್ಯಪಾನ ಮಾಡಬಾರದು, ನಗಬಾರದು ಅಥವಾ ವಿರಾಮ ಚಟುವಟಿಕೆಗಳಲ್ಲಿ ತೊಡಗಬಾರದು ಎಂದಿದ್ದಾರೆ. ಹಿಂದೆ ಶೋಕಾಚರಣೆಯ ಸಮಯದಲ್ಲಿ ಮದ್ಯಪಾನ ಅಥವಾ ಅಮಲಿನಲ್ಲಿ ಸಿಕ್ಕಿಬಿದ್ದ ಅನೇಕ ಜನರನ್ನು ಬಂಧಿಸಲಾಗಿತ್ತು. ಅವರನ್ನು ಸೈದ್ಧಾಂತಿಕ ಅಪರಾಧಿಗಳೆಂದು ಪರಿಗಣಿಸಿ ಕರೆದೊಯ್ಯಲಾಗಿತ್ತು. ಮತ್ತೆಂದೂ ಅವರು ಕಾಣಸಿಗಲಿಲ್ಲ. ಅಲ್ಲದೇ ಶೋಕಾಚರಣೆಯ ಸಮಯದಲ್ಲಿ ಕುಟುಂಬದ ಸದಸ್ಯರೇ ಸತ್ತರೂ ಜೋರಾಗಿ ಅಳುವಂತಿಲ್ಲ. ಶೋಕಾಚರಣೆ ಮುಗಿದ ನಂತರವಷ್ಟೇ ದೇಹವನ್ನು ಹೊರತೆಗೆಯಬೇಕು. ಶೋಕ ದಿನಗಳಲ್ಲಿ ಜನ್ಮದಿನವನ್ನು ಆಚರಿಸಿಕೊಳ್ಳುವಂತಿಲ್ಲ ಎಂದು ಆಘಾತಕಾರಿ ಮಾಹಿತಿ ಹೊರಹಾಕಿದ್ದಾರೆ.