ಭಾರತದ ಮಾನಸಾ ವಾರಣಾಸಿ ಸೇರಿ ಹಲವು ಸ್ಪರ್ಧಿಗಳಿಗೆ ಕೊರೊನಾ- ‘ವಿಶ್ವ ಸುಂದರಿ 2021’ಫೈನಲ್ ಮುಂದೂಡಿಕೆ…

69
firstsuddi

ಪೋರ್ಟೊ ರಿಕೊ: ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಹಲವು ಸ್ಪರ್ಧಿಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ʻವಿಶ್ವ ಸುಂದರಿ 2021ʼ ಫೈನಲ್ ಸ್ಪರ್ಧೆಯನ್ನು ಮುಂದೂಡಲಾಗಿದೆ.

ಭಾರತವನ್ನು ಪ್ರತಿನಿಧಿಸಲಿರುವ ಮಾನಸಾ ವಾರಣಾಸಿ ಅವರಿಗೂ ಕೊವಿಡ್ ದೃಢಪಟ್ಟಿದೆ ಎಂದು ಮಿಸ್ ಇಂಡಿಯಾ ಸಂಸ್ಥೆ ತಿಳಿಸಿದೆ.

ನಿನ್ನೆ ವಿಶ್ವ ಸುಂದರಿ ಸ್ಪರ್ಧೆ ನಡೆಯಬೇಕಿತ್ತು. ಆದರೆ ಸ್ಪರ್ಧಿಗಳು ಮತ್ತು ಸಹಾಯಕ ಸಿಬ್ಬಂದಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಸ್ಪರ್ಧಿಗಳು, ಸಿಬ್ಬಂದಿ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಮಿಸ್ ವರ್ಲ್ಡ್ ಫೈನಲ್ ಸ್ಪರ್ಧೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಮುಂದಿನ 90 ದಿನಗಳ ಒಳಗಾಗಿ ಸ್ಪರ್ಧೆಯನ್ನು ಪೋರ್ಟೊ ರಿಕೊದಲ್ಲೇ ಮರು ನಿಗದಿಪಡಿಸಲಾಗುವುದು ಎಂದು ಮಿಸ್ ವರ್ಲ್ಡ್ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಭಾರತದ ಸ್ಪರ್ಧಿ ಮಾನಸಾ ವಾರಣಾಸಿ ಅವರಿಗೂ ಸೋಂಕು ತಗುಲಿದ್ದು, ಪ್ರತ್ಯೇಕವಾಸದಲ್ಲಿದ್ದಾರೆ. ಕಠಿಣ ಪರಿಶ್ರಮ ಹಾಗೂ ಅರ್ಪಣಾ ಮನೋಭಾವದಿಂದ ಸಿದ್ಧತೆ ನಡೆಸಿದ್ದ ಆಕೆಗೆ ಫೈನಲ್ ಸ್ಪರ್ಧೆಯಲ್ಲಿ ಅವಕಾಶ ಕೈತಪ್ಪುವ ಆತಂಕ ಎದುರಾಗಿತ್ತು. ಆದರೆ ಸ್ಪರ್ಧಿಗಳ ಆರೋಗ್ಯ ಹಿತದೃಷ್ಟಿಯಿಂದ ಸ್ಪರ್ಧೆ ಮುಂದೂಡಲಾಗಿದೆ. ಅಂತಿಮ ಪಂದ್ಯವನ್ನು ರದ್ದುಗೊಳಿಸಿದ್ದಕ್ಕಾಗಿ ಮೋರ್ಲೆ ಅವರಿಗೆ ಧನ್ಯವಾದ ಅರ್ಪಿಸುತ್ತಾ, ನಾವು ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇವೆ ಮತ್ತು ಸೋಂಕಿತರೆಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ನಾವು ಬಯಸುತ್ತೇವೆ ಎಂದು ಮಿಸ್ ಇಂಡಿಯಾ ಸಂಸ್ಥೆ ತಿಳಿಸಿದೆ.