ಕುಂದಾಪುರ: ಅಪರಿಚಿತ ಯುವಕನ ಶವ ಪತ್ತೆ- ಪತ್ತೆಗೆ ಸಾರ್ವಜನಿಕರ ಸಹಕಾರ ಕೋರಿದ ಪೊಲೀಸರು…

201
firstsuddi

ಕುಂದಾಪುರ: ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಭಾಶಿ ಗ್ರಾಮದ ಕೊರವಾಡಿ ಬಳಿ ಅರಬ್ಬಿ ಸಮುದ್ರದಲ್ಲಿ 35-40 ವರ್ಷ ವಯಸ್ಸಿನ ಅನಾಮದೇಯ ಗಂಡಸಿನ ಮೃತ ದೇಹ ದೊರೆತಿದ್ದು, ಈತನ ಬಗ್ಗೆ ಮಾಹಿತಿ ದೊರೆತಲ್ಲಿ ಕುಂದಾಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಪತ್ತೆಗೆ ಸಹಕರಿಸಯವಂತೆ ಪೊಲೀಸರು ಕೋರಿದ್ದಾರೆ. ಮೃತ ವ್ಯಕ್ತಿ ಸುಮಾರು 5.5 ಅಡಿ ಎತ್ತರ ಇದ್ದು, ನಸು ಬಿಳಿ ಮೈಬಣ್ಣ ಇದ್ದು ಕಡು ನೀಲಿ ಬಣ್ಣದ ಅರ್ಧ ತೋಳಿನ ಟಿ ಶರ್ಟ್ ಹಾಗೂ 3/4 ಆರ್ಮಿ ಚಡ್ಡಿ ಧರಿಸಿರುತ್ತಾನೆ. ಮೃತರ ಬಗ್ಗೆ ಮಾಹಿತಿ ದೊರೆತಲ್ಲಿ ಕುಂದಾಪುರ ಪೊಲೀಸ್ ಠಾಣೆ ಫೋನ್ 08254-230338 ಅಥವಾ 9480805455 ಸಂಪರ್ಕಿಸುವಂತೆ ಕೋರಿದ್ದಾರೆ.