ಕುಡಿದ ಅಮಲಿನಲ್ಲಿ ಟ್ರಕ್ ಓಡಿಸಿ ಫುಟ್‍ಪಾತ್ ಮೇಲೆ ಮಲಗಿದ್ದ ಮೂವರನ್ನು ಕೊಂದ ಚಾಲಕ.

31
The large truck lies in a side ditch after the road accident.

ಪುಣೆ: ಇಂದು ಮುಂಜಾನೆ ಟ್ರಕ್ ರಸ್ತೆಯಿಂದ ಫುಟ್‍ಪಾತ್ ಮೇಲೆ ಪಲ್ಟಿಯಾಗಿ ಬಿದ್ದು, ಅದರ ಮೇಲೆ ಮಲಗಿದ್ದ 9 ಜನರು ಟ್ರಕ್‍ನಡಿ ಸಿಲುಕಿದ್ದಾರೆ. ಅವರಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ ಮತ್ತು 6 ಜನ ಗಾಯಗೊಂಡಿದ್ದಾರೆ ಎಂದು ಪೊಲೀಸರು  ತಿಳಿಸಿದ್ದಾರೆ. ಟ್ರಕ್ ಚಾಲಕನನ್ನು ಗಜಾನನ ಶಂಕರ್ ತೋಟೆ ಎಂದು ಗುರುತಿಸಲಾಗಿದೆ. ಆತ ಕುಡಿದು ವಾಹನ ಚಲಾಯಿಸುತ್ತಿದ್ದ. ಆತನನ್ನು ಪುಣೆ ಪೊಲೀಸರು ಬಂಧಿಸಲಾಗಿದೆ. ವಘೋಲಿಯ ಕೇಸ್ನಂದ್ ಫಾಟಾ ಬಳಿ ಇಂದು ಮುಂಜಾನೆ 1 ಗಂಟೆಗೆ ಅಪಘಾತ ಸಂಭವಿಸಿದೆ. ಅತಿವೇಗದಲ್ಲಿ ಸಾಗುತ್ತಿದ್ದ ಡಂಪರ್ ಟ್ರಕ್ ಏಕಾಏಕಿ ರಸ್ತೆಯಿಂದ 12 ಮಂದಿ ಮಲಗಿದ್ದ ಫುಟ್‍ಪಾತ್‍ಗೆ ಪಲ್ಟಿಯಾಗಿದೆ. 9 ಜನ ಟ್ರಕ್ ಅಡಿ ಸಿಲುಕಿ ನಜ್ಜುಗುಜ್ಜಾಗಿದ್ದು, ಇತರರು ಗಾಯಗಳೊಂದಿಗೆ ಪಾರಾಗಿದ್ದಾರೆ. ಸಂತ್ರಸ್ತರನ್ನು ತಕ್ಷಣವೇ ಸಾಸೂನ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಗಾಯಗೊಂಡವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ. ಮೃತರನ್ನು ವಿಶಾಲ್ ವಿನೋದ್ ಪವಾರ್, ವೈಭವಿ ರಿತೇಶ್ ಪವಾರ್, ಮತ್ತು ವೈಭವ್ ರಿತೇಶ್ ಪವಾರ್ ಎಂದು ಗುರುತಿಸಲಾಗಿದೆ.