ಕುಮಾರಸ್ವಾಮಿಗೆ ದೇವರು ಕೊಟ್ಟಿರುವ ಸರ್ಕಾರ ಇದು : ಹೆಚ್.ಡಿ. ರೇವಣ್ಣ…

274
firstsuddi

ಮೈಸೂರು : ಸರ್ಕಾರವನ್ನು ಉಳಿಸಿಕೊಳ್ಳಲು ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಅವರು ಚಾಮುಂಡೇಶ್ವರಿ ಮೊರೆ ಹೋಗಿದ್ದು, ಈ ವೇಳೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೆಸರಿನಲ್ಲಿ ಸಂಕಲ್ಪ ಮಾಡಿಕೊಂಡಿದ್ದು, ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ ಅವರು, ದೇವರ ಆಶೀರ್ವಾದ ಇರುವವರೆಗೂ ಕುಮಾರಣ್ಣನಿಗೆ ಏನೂ ಮಾಡೋಕಾಗಲ್ಲ. ಕುಮಾರಸ್ವಾಮಿಗೆ ದೇವರು ಕೊಟ್ಟಿರುವ ಸರ್ಕಾರ ಇದು. ಚಾಮುಂಡೇಶ್ವರಿ ತಾಯಿಯ ಆಶೀರ್ವಾದ ಕುಮಾರಸ್ವಾಮಿ ಅವರ ಮೇಲಿದೆ. ಸರ್ಕಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಒಂದು ವೇಳೆ ಸರ್ಕಾರ ಬಿದ್ದು ಹೋದರೆ ಕುಮಾರಸ್ವಾಮಿ ಅವರಿಗೆ ನಷ್ಟವಿಲ್ಲ. ರಾಜ್ಯದ ಜನತೆಗೆ ನಷ್ಟ ಎಂದು ಹೇಳಿದ್ದು, ಸಾ.ರಾ. ಮಹೇಶ್ ಅವರು ಬಿಜೆಪಿ ನಾಯಕರನ್ನು ಭೇಟಿಯಾಗಿರುವ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸಾ.ರಾ. ಮಹೇಶ್ ಅವರು ಬಿಜೆಪಿ ನಾಯಕರನ್ನು ಭೇಟಿಯಾಗಿರುವ ವಿಷಯ ನನಗೆ ಗೊತ್ತಿಲ್ಲ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಆಲೋಚನೆ ಇಲ್ಲ. ಇಂದು ನಡೆಯುವ ಅಧಿವೇಶನ ಕೂಡಾ ಸರಾಗವಾಗಿ ನಡೆಯುತ್ತದೆ ಎಂದು ಹೇಳಿದರು.