ಕುಷ್ಟರೋಗ ನಿಯಂತ್ರಣಾಧಿಕಾರಿ ತಲೆಯಲ್ಲಿ ಗುಂಡು ಪತ್ತೆ – ಸಾವಿನ ಸುತ್ತ ಅನುಮಾನದ ಹುತ್ತ…

26
firstsuddi

ಚಿತ್ರದುರ್ಗ : ಜಿಲ್ಲಾ ಕುಷ್ಟರೋಗ ನಿಯಂತ್ರಣಾಧಿಕಾರಿ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪೋಸ್ಟ್ ಮಾರ್ಟಮ್ ವೇಳೆ ತಲೆಗೆ ಗುಂಡು ಹಾರಿಸಿರುವುದು ಗೊತ್ತಾಗಿದೆ.

ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಕುಷ್ಟರೋಗ ನಿಯಂತ್ರಣಾಧಿಕಾರಿಯಾಗಿ ಡಾಕ್ಟರ್ ರೂಪ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು. ಇವರ ಪತಿ ರವಿ ಕೂಡ ಮೂಳೆರೋಗ ತಜ್ಞರಾಗಿದ್ದು, ವಿಪಿ ಬಡಾವಣೆಯಲ್ಲಿ ಖಾಸಗಿ ಕ್ಲಿನಿಕ್ ನಡೆಸುತ್ತಿದ್ದಾರೆ. ಆದರೆ ಮೊನ್ನೆ ರೂಂನಲ್ಲಿನ ಶೆಲ್ಪ್ ಗೆ ತಲೆಬಡಿಸಿಕೊಂಡ ಪರಿಣಾಮ ತೀವ್ರ ರಕ್ತಸ್ರಾವವಾಗಿ ಸಾವಿಗೀಡಾಗಿದ್ದಾರೆಂದು ಅವರ ಪತಿ ಡಾಕ್ಟರ್ ರವಿ ಎಲ್ಲರಿಗೂ ತಿಳಿಸಿದ್ರು. ಪೊಲೀಸರು ರೂಪ ಮೃತದೇಹವನ್ನು ಪೋಸ್ಟ್ ಮಾರ್ಟಂಗೆ ಕಳಿಸಿದ್ರು. ಆಗ ರೂಪ ತಲೆಯಲ್ಲಿದ್ದ ರಿವಾಲ್ವರ್ ನ ಗುಂಡು ಕಂಡ ಪೊಲೀಸರು ಶಾಕ್ ಆಗಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಚಿತ್ರದುರ್ಗ ನಗರ ಠಾಣೆ ಪೊಲೀಸರು ಪ್ರಕರಣದ ಬೆನ್ನತ್ತಿದಾಗ ಮೃತಳ ಕೊಠಡಿಯಲ್ಲಿ ಡೆತ್‍ನೋಟ್ ಸಿಕ್ಕಿದೆ. ಅದರಲ್ಲಿ ನನ್ನ ಸಾವಿಗೆ ನಾನೇ ಕಾರಣ ಎಂಬುದನ್ನು ಆಕೆ ಬರೆದಿದ್ದಾರೆ. ಹೃದಯಾಘಾತ ದಿಂದ ರೂಪ ಸಾವನ್ನಪ್ಪಿದ್ರು ಅಂತ ತಿಳಿಸಿ, ಪೊಲೀಸರಿಗೆ ಮಾಹಿತಿ ನೀಡಬೇಡಿ ಎಂದು ಬರೆದಿದರು ಎನ್ನಲಾಗ್ತಿದೆ. ರೂಪ ಅವರ ಸಹೋದರ ಇದೊಂದು ಮರ್ಡರ್ ಅಂತ ಪೊಲೀಸರಿಗೆ ದೂರು ನೀಡಿರುವ ಪರಿಣಾಮ ಎಚ್ಚೆತ್ತ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಒಟ್ಟಾರೆ ಡಾ.ರೂಪ ಅವರ ತಲೆಯಲ್ಲಿ ರಿವಾಲ್ವರ್ ನ ಗುಂಡು ಪತ್ತೆಯಾದ ಪರಿಣಾಮ ಅವರ ಸಾವಿನ ಸುತ್ತ ಅನುಮಾನದ ಹುತ್ತ ಮನೆಮಾಡಿದೆ.