ಕೈಯಲ್ಲಿ ತಲವಾರ್ ಹಿಡಿದುಕೊಂಡು ಮೋದಿ ನರ ಕಟ್ ಮಾಡುತ್ತೇನೆಂದವ ಅರೆಸ್ಟ್…

46
firstsuddi

ಯಾದಗಿರಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ನಿಂದಿಸಿ ಜೀವ ಬೆದರಿಕೆ ಹಾಕಿದ್ದ ಆರೋಪಿಯನ್ನು ಸುರಪುರ ಪೊಲೀಸರು ಬಂಧಿಸಿದ್ದಾರೆ.

ಮಹಮ್ಮದ್ ರಸೂಲ್ ಕಡ್ದಾರೆ ಬಂಧಿತ ಆರೋಪಿ. ಈತ, ಹೈದರಾಬಾದ್‌ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ. ಮಹಮ್ಮದ್ ರಸೂಲ್ ತನ್ನ ಕೈಯಲ್ಲಿ ತಲವಾರ್ ಹಿಡಿದುಕೊಂಡು ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ್ದ. ಹೈದರಾಬಾದ್ ನಲ್ಲಿದ್ದುಕೊಂಡೇ ವೀಡಿಯೋ ಮಾಡಿ ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದ.

ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ರಾಮಸೇನಾ ಜಿಲ್ಲಾಧ್ಯಕ್ಷ ಶರಣು ನಾಯಕ ನಿನ್ನೆ ಸುರಪುರ ಠಾಣೆಯಲ್ಲಿ ದೂರು ನೀಡಿದ್ದರು. ಈ ಪ್ರಕರಣ ದಾಖಲಿಸಿಕೊಂಡಿದ್ದ ಸುರಪುರ ಪೊಲೀಸರು, ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣದ ಹಿನ್ನಲೆ:-
ಸುರಪುರದ ರಂಗಂಪೇಟೆ ನಿವಾಸಿ ಮಹಮದ್ ರಸೂಲ್ ಕಡ್ದಾರೆ ಎಂಬಾತ ಕೈಯಲ್ಲಿ ತಲವಾರ ಹಿಡಿದು ಮೋದಿ ಹಾಗೂ ಯೋಗಿ ವಿರುದ್ಧ ಫೇಸ್‍ಬುಕ್ ಪೇಜ್‍ನಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಮಾಡೋದಾಗಿ ಬೆದರಿಕೆಯ ವೀಡಿಯೋ ಹರಿಬಿಟ್ಟಿದ್ದಾನೆ. ಹೈದರಾಬಾದ್‌ನಲ್ಲಿ ಕೂಲಿ ಕೆಲಸ ಮಾಡುವ ಮಹಮದ್ ರಸೂಲ್ ಅಲ್ಲಿಂದಲೇ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ವೀಡಿಯೋ ಅಪ್ಲೋಡ್ ಮಾಡಿದ್ದಾನೆ.

ಕಾಂಗ್ರೆಸ್ ಆಡಳಿತದಲ್ಲಿ ಹೀಗೆಲ್ಲ ಅಧಿಕಾರ ಮಾಡಿಲ್ಲ. ಮೋದಿ ಪಿಎಂ ಆಗಿದ್ದೀನಿ ಎಂದು ನಾಟಕ ಮಾಡುತ್ತಿದ್ದಿಯಾ. ಮೋದಿ ಆಡಳಿತ ಸರಿಯಾಗಿ ಮಾಡುತ್ತಿಲ್ಲ. ಅಟಲ್ ಬಿಹಾರಿ ವಾಜಪೇಯಿ ಅವರು ನಿಮ್ಮತರಹ ಕೆಟ್ಟ ಆಡಳಿತ ಮಾಡಿಲ್ಲ. ನೀನು ಟೀ ಮಾರಾಟ ಮಾಡುತ್ತಿದ್ದೆ. ಪಾರ್ಟಿ ಬಿಟ್ಟು ನನ್ನ ಜೊತೆ ಜಗಳಕ್ಕೆ ಬಾ ಎಂದು ವೀಡಿಯೋದಲ್ಲಿ ಹೇಳಿದ್ದಾನೆ.

ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದ್ರೆ ಪಿಎಂ ಮೋದಿ ದೇಹದ ನರಗಳನ್ನು ಕಟ್ ಮಾಡುತ್ತೇನೆ. ಕಾಂಗ್ರೆಸ್ ಜಿಂದಾಬಾದ್ ಎಂದು ವೀಡಿಯೋದಲ್ಲಿ ಹೇಳಿಕೊಂಡಿದ್ದಾನೆ.

ಈ ಸಂಬಂಧ ಸುರಪುರ ಪೊಲೀಸ್ ಠಾಣೆಯಲ್ಲಿ ಮಹಮದ್ ರಸೂಲ್ ವಿರುದ್ಧ ಕೊಲೆ ಬೆದರಿಕೆ, ನಿಂದನೆ ಹಾಗೂ ಸಶಸ್ತ್ರ ಕಾಯ್ದೆಯಡಿ ಕೇಸ್ ದಾಖಲಾಗಿತ್ತು.