ಕೊಟ್ಟಿಗೆಹರ :ತರಿಮಲೆಯಲ್ಲಿ ವಿಜೃಂಭಣೆಯಿಂದ ನಡೆದ ಕಲಾವಳಿ ಉತ್ಸವ

18

ಕೊಟ್ಟಿಗೆಹಾರ: ತರುವೆಯ ಶ್ರೀ ಚೌಡೇಶ್ವರಿ ಅಮ್ಮನವರ ಕಲಾವಳಿ ಉತ್ಸವ ಗುರುವಾರ ರಾತ್ರಿ ಆದಿಸ್ಥಾನ ತರಿಮಲೆಯಲ್ಲಿ ವಿಜೃಂಭಣೆಯಿಂದ ನಡೆಯಿತು.
ಗುರುವಾರ ಸಂಜೆ 4 ಗಂಟೆಯಿಂದ ಪೂಜಾ ವಿಧಿವಿಧಾನಗಳು ಪ್ರಾರಂಭವಾಗಿದ್ದು ರಾತ್ರಿ 8 ಗಂಟೆಗೆ 101 ದೈವಗಳಿಗೆ ದೀಪಾರಾಧನೆ, ನೈವೈದ್ಯ ಸಮರ್ಪಣೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆ ನಡೆಯಿತು.
ದಟ್ಟ ಕಾನನದ ನಡುವಿನ ದೈವಸ್ಥಾನದಲ್ಲಿ ನಡೆದ ಕಲಾವಳಿ ಉತ್ಸವಕ್ಕೆ ತರುವೆ, ಕೊಟ್ಟಿಗೆಹಾರ, ಅತ್ತಿಗೆರೆ, ಮೂಡಿಗೆರೆ, ಬೆಂಗಳೂರು ಸೇರಿದಂತೆ ವಿವಿದೆಡೆಯಿಂದ ಭಕ್ತಾಧಿಗಳು ಆಗಮಿಸಿದ್ದರು. ದೇವರಿಗೆ ಹಣ್ಣುಕಾಯಿ ಅರ್ಪಿಸಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಹಾಗೂ ತರುವೆ ಗ್ರಾಮದ ಗ್ರಾಮಸ್ಥರು ಹಾಜರಿದ್ದರು.