ಕೊಡಗಿನ ನಿರಾಶ್ರಿತರಿಗೆ ಕುದುರೆಮುಖದಲ್ಲಿ ವಸತಿ ನೀಡಿ : ಕಳಸ ಜನರ ಆಗ್ರಹ.

965

ಮೂಡಿಗೆರೆ : ಕೊಡಗಿನಲ್ಲಿ ಸುರಿದ ಮಹಾಮಳೆಗೆ ಸಾವಿರಾರು ಕುಟುಂಬಗಳು ಬೀದಿ ಪಾಲಾಗಿವೆ. ಇರೋಕೆ ನೆಲೆ ಇಲ್ಲದೆ ನಿರಾಶ್ರಿತರಾಗಿರೋ ನೂರಾರು ಕುಟುಂಬಗಳಿಗೆ ಅನಾಥಪ್ರಜ್ಞೆ ಕಾಡ್ತಿದೆ. ಸರ್ಕಾರ ಆಶ್ವಾಸನೆ, ಭರವಸೆ ನೀಡಿದ್ರು ಎಲ್ಲಾ ಸೌಕರ್ಯ ಒದಗಿಸಲು ಮೂರ್ನಾಲ್ಕು ವರ್ಷಗಳೇ ಬೇಕು. ಪುನರ್ವಸತಿ ಕೆಲಸ ಆರಂಭಿಸಲು ಮಳೆಗಾಲವಂತು ಮುಗಿಯಬೇಕು. ಮಳೆಗಾಲ ಮುಗಿಯೋತನಕ ಯಾವಾಗ, ಏನೋ ಅನ್ನೋ ಭಯ ಜನ ಹಾಗೂ ಸರ್ಕಾರ ಇಬ್ಬರಿಗೂ ಇದೆ. ಅದಕ್ಕಾಗಿ ಕೊಡಗಿನ ಮಳೆಯಿಂದ ನಿರಾಶ್ರಿತರಾಗಿರೋ ನೂರಾರು ಕುಟುಂಬಗಳಿಗೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ಕುದುರೆಮುಖದಲ್ಲಿ ತಾತ್ಕಾಲಿಕ ವಸತಿ ಸೌಲಭ್ಯ ಕಲ್ಪಿಸುವ ಎಲ್ಲಾ ಸೌಕರ್ಯವಿದೆ. ಕುದುರೆಮುಖದ ಸ್ಥಳಿಯರು ಕೂಡ ಸರ್ಕಾರಕ್ಕೆ ಅದನ್ನೇ ಒತ್ತಾಯಿಸಿದ್ದಾರೆ.
ಕುದುರೆಮುಖದಲ್ಲಿ ಐರನ್ ಅಂಡ್ ಓರ್ ಕಂಪನಿ ಲಿಮಿಟೆಡ್ ಗೆ ಸೇರಿದ ಸಾವಿರಾರು ಮನೆಗಳಿವೆ. ಸದ್ಯಕ್ಕೆ ಅವೆಲ್ಲಾ ಪಾಳು ಬಿದ್ದಿವೆ. ಆ ಮನೆಗಳನ್ನ ತಾತ್ಕಾಲಿಕ ವಾಗಿ ಕೊಡಗಿನ ನಿರಾಶ್ರಿತರಿಗೆ ನೀಡಬೇಕೆಂದು ಜನ ಆಗ್ರಹಿಸಿದ್ದಾರೆ. 15 ವರ್ಷದ ಹಿಂದೆಯೇ ಕೆಐಓಸಿಎಲ್ ಕಂಪನಿ ಸ್ಥಗಿತಗೊಂಡಿದೆ. ಆದ್ದರಿಂದ ಪಾಳು ಬಿದ್ದಿರುವ ಮನೆಗಳನ್ನ ದುರಸ್ತಿ ಮಾಡಿ ಕೊಡಗಿನ ನಿರಾಶ್ರಿತರಿಗೆ ನೀಡಬೇಕೆಂದು ಕಳಸಾದ ಜನ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.