ನವದೆಹಲಿ : ಕೊರೊನಾ ವೈರಸ್‍ಗೆ ಚೀನಾ ಅಕ್ಷರಶಃ ತತ್ತರಿಸಿ ಹೋಗಿದ್ದು, ಈ ಹಿನ್ನೆಲೆ,ಕೊರೊನಾ ವೈರಸ್ ಪೀಡಿತ ಚೀನಾದ ವುಹಾನ್ ಪ್ರಾಂತ್ಯದಲ್ಲಿ ಸಿಲುಕಿದ್ದ 324 ಮಂದಿ ಭಾರತೀಯರನ್ನು ಇಂದು ವಿಶೇಷ ವಿಮಾನದಲ್ಲಿ ಸ್ವದೇಶಕ್ಕೆ ಕರತರಲಾಗಿದೆ. ಏರ್ ಇಂಡಿಯಾ ಬೋಯಿಂಗ್ 747 ವಿಶೇಷ ವಿಮಾನದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ ವೈದ್ಯರು ಮತ್ತು ಏರ್ ಇಂಡಿಯಾ ಅರೆವೈದ್ಯರು ನಿನ್ನೆ ಮಧ್ಯಾಹ್ನ 1:15 ನವದೆಹಲಿಯಿಂದ ವುಹಾನ್ ಪ್ರಾಂತ್ಯಕ್ಕೆ ಪಯಣ ಬೆಳೆಸಿ ಅಲ್ಲಿದ್ದ 324 ಮಂದಿ ಭಾರತೀಯನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತಂದಿದ್ದಾರೆ. ವಿಮಾನದಲ್ಲಿ ಸಿಬ್ಬಂದಿ ಹಾಗೂ ಪ್ರಯಾಣಿಕರಿಗೆ ಮಾಸ್ಕ್‍ಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಚೀನಾದಲ್ಲಿ ಮೃತಪಟ್ಟವರ ಸಂಖ್ಯೆ 312ಕ್ಕೆ ಏರಿದ್ದು, ಈವರೆಗೆ 9,962 ಪ್ರಕರಣಗಳು ದೃಢಪಟ್ಟಿರುವುದಾಗಿ ಚೀನಾದ ಅಧಿಕಾರಿಗಳು ತಿಳಿಸಿದ್ದಾರೆ.










