ನವದೆಹಲಿ : ಇಂದು ಲೋಕಸಭೆಯಲ್ಲಿ 2020ನೇ ಸಾಲಿನ ಕೇಂದ್ರ ಸರ್ಕಾರದ 2ನೇ ಬಜೆಟ್ ಮಂಡನೆ ಮಾಡುತ್ತಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಕೃಷಿ ಕ್ಷೇತ್ರಕ್ಕೆ, ರೈತರಿಗೆ ಅನುಕೂಲವಾಗುವಂತೆ 16 ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.
1) ನೀರಿನ ಅಭಾವವಿರುವ 100 ಜಿಲ್ಲೆಗಳಿಗೆ ಸಮಗ್ರ ಯೋಜನೆ.
2) ಬರಡು ಭೂಮಿಯಲ್ಲಿ ಸೋಲಾರ್ ಯೋಜನೆ.
3) ಸಾವಯವ ಉತ್ಪನ್ನಗಳ ಆನ್‍ಲೈನ್ ಮಾರಾಟ.
4) 2021ರ ವೇಳೆಗೆ ಕೃಷಿಗೆ 15ಲಕ್ಷ ಕೋಟಿ ಸಾಲ ನೀಡುವ ಗುರಿ.
5) 2025ರ ವೇಳೆಗೆ ಹಾಲು ಉತ್ಪಾದನೆಯನ್ನು 53.5 ಮಿಲಿಯನ್ ಮೆಟ್ರಿಕ್ ಟನ್‍ನಿಂದ 108 ಮೆಟ್ರಿಕ್ ಟನ್‍ಗೆ ಹೆಚ್ಚಿಸುವ ಗುರಿ.
6) ಕೃಷಿ ಉಡಾನ್ ಯೋಜನೆಯ ಮೂಲಕ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡಲು ವಿಶೇಷ ಸರಕು ಸಾಗಣೆ ವಿಮಾನಗಳ ಅನುಷ್ಠಾನ.
7) ನಬಾರ್ಡ್ ಯೋಜನೆಯ ಮೂಲಕ ದೇಶಾದ್ಯಂತ 162 ಟನ್ ದಶಲಕ್ಷದ ಸಾಮರ್ಥ್ಯದ ಕೃಷಿ ಉಗ್ರಾಣ ನಿರ್ಮಾಣಕ್ಕೆ ನೆರವು.
8) ಧಾನ್ಯಲಕ್ಷ್ಮಿ ಯೋಜನೆಯ ಮೂಲಕ ರೈತರು ಮತ್ತು ರೈತ ಮಹಿಳೆಯರು ಹಳ್ಳಿಗಳಲ್ಲೇ ದಾಸ್ತಾನು ಮಳಿಗೆಗಳನ್ನು ಸ್ಥಾಪಿಸುವುದರಿಂದ ಆಹಾರ ಸಂಗ್ರಹಕ್ಕೆ ಅನುಕೂಲ.
9) ಸಾಗರ್ ಮಿತ್ರ ಯೋಜನೆ ಮೂಲಕ ಮೀನುಗಾರಿಕೆಗೆ ಹೆಚ್ಚು ಹೆಚ್ಚು ಯುವಕರು ಪಾಲ್ಗೊಳ್ಳುವಿಕೆ ಹೆಚ್ಚಳಕ್ಕೆ ಕ್ರಮ.
10) ರಾಸಾಯನಿಕ ಗೊಬ್ಬರಗಳ ಬಳಕೆಯಲ್ಲಿ ಸಮತೋಲನ ಸಾಧಿಸುವುದು.
11) ಕುಸುಮ್ ಯೋಜನೆಯ ಮೂಲಕ ಸೀಮೆಎಣ್ಣೆ ಬಳಕೆಯನ್ನು ಕಡಿಮೆಗೊಳಿಸಿ ಸೌರಶಕ್ತಿ ಬಳಕೆಯನ್ನು ಉತ್ತೇಜಿಸುತ್ತದೆ.
12) ಗ್ರಾಮೀಣ ಪ್ರದೇಶದಲ್ಲಿರುವ ನಿರುದ್ಯೋಗಿಗಳಿಗೆ ಉದ್ಯೋಗ.
13) ಜಾನುವಾರುಗಳ ಕಾಲುಬಾಯಿ ರೋಗ ತಡೆಗೆ ಕ್ರಮ.
14) ಕೃಷಿ ಉತ್ಪನ್ನಗಳಿಗಾಗಿ ಇ-ಮಾರುಕಟ್ಟೆ ವ್ಯವಸ್ಥೆ.
15) ಮಾದರಿ ಕೃಷಿ ನಿಯಮಾವಳಿಗಳನ್ನು ಅಳವಡಿಸಿಕೊಳ್ಳಲು ರಾಜ್ಯಗಳಿಗೆ ಪ್ರೋತ್ಸಾಹ.
16) ಗ್ರಾಮೀಣ ಸ್ಟೋರೇಜ್ ಯೋಜನೆಯ ಮೂಲಕ ರೈತರ ಲಾಜಿಸ್ಟಿಕ್ ವೆಚ್ಚವನ್ನು ಕಡಿಮೆ ಮಾಡಲು ನೆರವಾಗುತ್ತದೆ.










