ಪಂಜಾಬ್ ಪೊಲೀಸರು 18 ತಿಂಗಳುಗಳಲ್ಲಿ 11 ಪುರುಷರನ್ನು ಕೊಲೆ ಮಾಡಿದ್ದ ಸೀರಿಯಲ್ ಕಿಲ್ಲರ್‍ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಒಬ್ಬ ಸಲಿಂಗಿ, ಈ 11 ಪುರುಷರನ್ನು ಹತ್ಯೆ ಮಾಡುವ ಮುನ್ನ ಅವರ ಜತೆ ಸಂಬಂಧ ಹೊಂದಿದ್ದ ಎನ್ನುವುದನ್ನು ಹೇಳಿದ್ದಾರೆ. ಇಲ್ಲಿಯವರೆಗೆ ಆತ 11 ಹತ್ಯೆ ಮಾಡಿದ್ದರೂ ಆತನಿಗೆ ಕೆಲವು ಕೊಲೆಗಳ ಬಗ್ಗೆ ಅಷ್ಟಾಗಿ ನೆನಪೇ ಇಲ್ಲವಂತೆ. ಹತ್ಯೆ ಮಾಡಿ ಬಳಿಕ ಶವದ ಪಾದ ಮುಟ್ಟಿ ಕ್ಷಮೆ ಕೇಳುತ್ತಿದ್ದನಂತೆ. ಆತ ರಸ್ತೆಯಲ್ಲಿ ಕಾಣುವ ಪುರುಷರನ್ನು ಟಾರ್ಗೆಟ್ ಮಾಡುತ್ತಿದ್ದ. ಅವರೊಂದಿಗೆ ದೈಹಿಕ ಸಂಪರ್ಕ ಸಾಧಿಸಿ ತನ್ನ ರಹಸ್ಯ ಬಯಲಾಗದಂತೆ ಅವರನ್ನು ದರೋಡೆ ಮಾಡಿ ಕೊಂದು ಹಾಕುತ್ತಿದ್ದ. ಆರೋಪಿ ರಾಮ್ ಸರೂಪ್ ಅಲಿಯಾಸ್ ಸೋಧಿ ಕಿರಾತ್‍ಪುರ ಸಾಹಿಬ್ ಬಳಿಯ ಮೌಡಾ ಟೋಲ್ ಪ್ಲಾಜಾ ಬಳಿ ಅವರನ್ನು ಹಿಡಿಯಲಾಗಿದೆ. ರೋಪರ್ ಜಿಲ್ಲೆಯಲ್ಲಿ ನಡೆದ ಮೂರು ಕೊಲೆ ಘಟನೆಗಳು ಪೊಲೀಸರ ನಿದ್ದೆಗೆಡಿಸುತ್ತಿದ್ದವು. ಆತ 10ಕ್ಕೂ ಹೆಚ್ಚು ಜನರನ್ನು ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಮೃತ ಹರ್‌ಪ್ರೀತ್ಅ ಲಿಯಾಸ್ ಸನ್ನಿ ಮೊದಲು ತನ್ನೊಂದಿಗೆ ಸಂಬಂಧ ಹೊಂದಿದ್ದ ಎಂದು ಆರೋಪಿ ಸೋಧಿ ತಿಳಿಸಿದ್ದಾನೆ. ನಂತರ ಮೃತ ಹರ್‌ಪ್ರೀತ್ ಅಲಿಯಾಸ್ ಸನ್ನಿ ಹಣ ಕೊಡಲು ನಿರಾಕರಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಜಗಳ ನಡೆದು ಹರ್‌ಪ್ರೀತ್ ನನ್ನು ಕೊಲೆ ಮಾಡಿದ್ದಾನೆ. ಆತ ಮಾದಕ ವ್ಯಸನಿಯಾಗಿದ್ದು, ಕುಡಿದ ಮತ್ತಿನಲ್ಲೇ ಎಲ್ಲಾ ಅಪರಾಧಗಳನ್ನು ಮಾಡುತ್ತಿದ್ದ. ಎರಡು ವರ್ಷಗಳ ಹಿಂದೆ ಅಷ್ಟೇ ಆತನ ಕುಟುಂಬಸ್ಥರು ಆತನನ್ನು ಮನೆಯಿಂದ ಹೊರಹಾಕಿದ್ದರು ಎಂದು ಪೊಲೀಸರು ತಿಳಿಸಲಾಗಿದೆ. ಆರೋಪಿಗೆ ಮದುವೆಯಾಗಿದ್ದು, ಮೂವರು ಮಕ್ಕಳಿದ್ದಾರೆ ಎಂದು ತಿಳಿಸಿದರು.










