ಕೋವಿಡ್‌ಗಿಂತಲೂ ಭೀಕರವಾದ ಮಾರಣಾಂತಿಕ ಪಿಡುಗು ಎದುರಿಸಲು ಸಿದ್ಧರಾಗಿರಿ – ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ…

54
firstsuddi

ಜಿನೀವಾ: ವಿಶ್ವ, ಇದೀಗ ಮತ್ತೊಂದು ಮಾರಣಾಂತಿಕ ಪಿಡುಗು ಎದುರಿಸಲು ಸಿದ್ಧರಾಗಿರಿ. ಇದು ಕೋವಿಡ್‌ಗಿಂತಲೂ ಭೀಕರ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

ಮುಂದಿನ ಸಾಂಕ್ರಾಮಿಕ ರೋಗಕ್ಕೆ ಜಗತ್ತು ಸಿದ್ಧವಾಗಬೇಕು. ಇದು ಕೋವಿಡ್-19 ಗಿಂತಲೂ ಹೆಚ್ಚು ಮಾರಣಾಂತಿಕವಾಗಿರಬಹುದು. ಪ್ರಪಂಚದಾದ್ಯಂತ ಕೋವಿಡ್ ಪ್ರಕರಣಗಳು ಸ್ವಲ್ಪಮಟ್ಟಿಗೆ ಸ್ಥಿರಗೊಳ್ಳುತ್ತಿದ್ದರೂ ಕೋವಿಡ್‌ನ ಅಂತ್ಯ ಜಾಗತಿಕ ಆರೋಗ್ಯ ಬೆದರಿಕೆಯ ಅಂತ್ಯವಲ್ಲ ಎಂದು ಡಬ್ಲ್ಯುಹೆಚ್ಒನ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ.

76ನೇ ಆರೋಗ್ಯ ಸಭೆಯಲ್ಲಿ ಮಾತನಾಡಿದ ಗ್ರೆಬಿಯಾಸಿಸ್ ಹಲವು ಅಂಕಿ ಅಂಶಗಳನ್ನು, ತಜ್ಞರ ವರದಿಯನ್ನು ತೆರೆದಿಟ್ಟು ಮಹತ್ವದ ಎಚ್ಚರಿಕೆ ನೀಡಿದ್ದಾರೆ. ಕೋವಿಡ್ ಬಹುತೇಕ ದೇಶದಲ್ಲಿ ಅಂತ್ಯಗೊಂಡಿದೆ. ಕೆಲ ದೇಶಗಳಲ್ಲಿ ಕೋವಿಡ್ ವೈರಸ್ ಹಲವು ರೂಪಾಂತರಗೊಂಡು ಕಾರ್ಯನಿರ್ವಹಿಸುತ್ತಿದೆ. ಆದರೆ ತೀವ್ರತೆ ಕಡಿಮೆಯಾಗಿದೆ. ಇಡೀ ವಿಶ್ವಕ್ಕೆ ಮತ್ತೊಂದು ಪಿಡುಗಿನ ಸೂಚನೆ ಸಿಕ್ಕಿದೆ. ಈ ಪಿಡುಗು ಕೋವಿಡ್ ವೈರಸ್‌ಗಿಂತ ಮಾರಣಾಂತಿಕವಾಗಿದ್ದು, ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಲಿದೆ ಎಂದು ಗೆಬ್ರಿಯಾಸಿಸ್ ಹೇಳಿದ್ದಾರೆ.