ಕ್ವಾಲಿಸ್ ಕಾರು- ಟ್ರಕ್ ನಡುವೆ ಡಿಕ್ಕಿ; 6 ಮಂದಿ ಸಾವು…

49
firstsuddi

ಮಹಾರಾಷ್ಟ್ರ: ಕ್ವಾಲಿಸ್ ಕಾರು ಮತ್ತು ಟ್ರಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿರುವ ಘಟನೆ ನಾಗ್ಪುರದ ಕಟೋಲ್ ತಾಲೂಕಿನ ಸೋನ್‌ಖಾಂಬ್‌ನಲ್ಲಿ ನಡೆದಿದೆ.

ಕಾರಿನಲ್ಲಿದ್ದ ಏಳು ಜನರು ನಾಗ್ಪುರದಿಂದ ಕಟೋಲ್ ಕಡೆಗೆ ಪ್ರಯಾಣಿಸುತ್ತಿದ್ದಾಗ ಟ್ರಕ್ ಕಾರಿಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕಾರ್ಪಿಯೋದಲ್ಲಿದ್ದ ಒಂದೇ ಗ್ರಾಮದ 6 ಮಂದಿ ಸಾವನ್ನಪ್ಪಿದ್ದಾರೆ.

ಮೃತರನ್ನು ಅಜಯ್ ದಶರತ್ ಚಿಖ್ಲೆ (45), ವಿಠ್ಠಲ್ ದಿಗಂಬರ್ ತೋಟೆ (45), ಸುಧಾಕರ ರಾಮಚಂದ್ರ ಮಾನಕರ್ (42), ರಮೇಶ್ ಓಂಕಾರ್ ಹೆಲೊಂಡೆ (48), ಮಯೂರ್ ಮೊರೇಶ್ವರ್ ಇಂಗ್ಲೆ (26) ಮತ್ತು ವೈಭವ್ ಸಾಹೇಬ್ರಾವ್ ಚಿಖ್ಲೆ (32) ಎಂದು ಗುರುತಿಸಲಾಗಿದ್ದು, ಗಾಯಾಳುಗಳನ್ನು ನಾಗ್ಪುರದ ಸರ್ಕಾರಿ ವೈದ್ಯಕೀಯ ಆಸ್ಪತ್ರೆಯಲ್ಲಿ ಟ್ರಾಮಾ ಸೆಂಟರ್‌ಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಸಂಬಂಧ ಟ್ರಕ್ ಚಾಲಕನನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.