ಮುಂಬೈ : ಬಾಲಿವುಡ್ ನ ಖ್ಯಾತ ನಟಿ ಹಾಗೂ ಕ್ರಿಕೆಟ್ ನಿರೂಪಕಿ ಮಂದಿರಾ ಬೇಡಿ ಅವರ ಪತಿ ರಾಜ್ ಕೌಶಲ್(49) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಇಂದು ಬೆಳಗ್ಗೆ 4.30ರ ಸುಮಾರಿಗೆ ರಾಜ್ ಕೌಶಾಲ್ ಅವರು ಹೃದಯಘಾತದಿಂದ ಕೊನೆಯುಸಿರೆಳೆದಿದ್ದಾರೆ. ರಾಜ್ ಕೌಶಲ್ ಅವರು ಪತ್ನಿ ಮಂದಿರ ಬೇಡಿ ಮತ್ತು ಇಬ್ಬರು ಮಕ್ಕಳಾದ ವೀರ್ ಮತ್ತು ತಾರಾ ಅವರನ್ನು ಅಗಲಿದ್ದಾರೆ.
ರಾಜ್ ಕೌಶಲ್ ಅವರು ಬಾಲಿವುಡ್ ನಿರ್ಮಾಪಕರಾಗಿದ್ದು, ಅವರು ನಟರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಪ್ಯಾರ್ ಮೇ ಕಬಿ ಕಭಿ, ಶಾದಿ ಕಾ ಲಡ್ಡೂ ಮತ್ತು ಆಂಥೋನಿ ಕೌನ್ ಹೈ ಎಂಬ ಮೂರು ಚಿತ್ರಗಳನ್ನು ನಿರ್ದೇಶಿಸಿದ್ದರು.
ನಿರ್ದೇಶಕ ಓನರಿ ಅವರು ರಾಕ್ ಕೌಶಲ್ ಅವರ ನಿಧನವನ್ನು ಖಚಿತಪಡಿಸಿದ್ದು, ಇಂದು ಬೆಳಗ್ಗೆ ನಿರ್ಮಾಪಕ ಮತ್ತು ಫಿಲಂ ಮೇಕರ್ ರಾಜ್ ಕೌಶಲ್ ಅವರನ್ನ ಕಳೆದುಕೊಂಡಿದ್ದೇವೆ. ಅವರ ನಿಧನದ ಸುದ್ದಿ ತಿಳಿಸಲು ದುಃಖವಾಗ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.










