ಗುಂಡಿನ ದಾಳಿಗೆ ಬಲಿಯಾದ ಶಿವಸೇನೆ ಮುಖಂಡ ಸುಧೀರ್ ಸೂರಿ.

83
firstsuddi

ಚಂಡೀಗಢ : ಶಿವಸೇನೆ ಮುಖಂಡ ಸುಧೀರ್ ಸೂರಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

 ಪಂಜಾಬ್ ನ ಅಮೃತಸರದ ಗೋಪಾಲ್ ದೇವಸ್ಥಾನದ ಬಳಿ ಶಿವಸೇನೆಯ ಮುಖಂಡರೊಂದಿಗೆ ಸುಧೀರ್ ಸೂರಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಗುಂಪಿನಲ್ಲಿದ್ದ ಅಪರಿಚಿತ ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದಾನೆ. ಸುಧೀರ್ ಸೂರಿ ಗಂಭೀರ ಗಾಯಗೊಂಡು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಆಸ್ಪತ್ರೆಯಲ್ಲಿ ಸುಧೀರ್ ಸೂರಿ ಕೊನೆಯುಸಿರೆಳೆದಿದ್ದಾರೆ.

ಈ ವರ್ಷ ಜುಲೈನಲ್ಲಿ ನಿರ್ದಿಷ್ಟ ಸಮುದಾಯದ ಬಗ್ಗೆ ಆಕ್ಷೇಪಾರ್ಹ ಭಾಷಣ ಮಾಡಿ, ಧಾರ್ಮಿಕ ಭಾವನೆಯನ್ನು ಕೆರಳಿಸಿರುವ ಆರೋಪದ ಮೇಲೆ ಸೂರಿ ಬಂಧನಕ್ಕೊಳಗಾಗಿ ಬಿಡುಗಡೆಯೂ ಆಗಿದ್ದರು. ಆಗಿನಿಂದ ಸುಧೀರ್ ಸೂರಿ ಅವರು ಸುದ್ದಿಯಲ್ಲಿದ್ದರು.