ಗುಜರಾತ್ : ಜುಲೈ 26ರಿಂದ 9 ಮತ್ತು 11ನೇ ತರಗತಿಗಳು ಪುನಾರಂಭ…

109
firstsuddi

ಗಾಂಧೀನಗರ : ಜುಲೈ 26ರಿಂದ 9ನೇ ಮತ್ತು 11ನೇ ತರಗತಿಗಳನ್ನು ಶೇಕಡಾ 50ರಷ್ಟು ಸಾಮರ್ಥ್ಯದೊಂದಿಗೆ ಶಾಲೆ ತೆರೆಯಲು ಗುಜರಾತ್ ಸರ್ಕಾರ ಅನುಮತಿ ನೀಡಿದೆ. ರಾಜ್ಯದಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ಗಣನೀಯವಾಗಿ ಇಳಿಕೆಯಾದ ಹಿನ್ನಲೆ ಗುಜರಾತ್ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಎಎನ್ ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕೋವಿಡ್-19 ನಿಯಮಗಳ ಅನುಸಾರ ಶಾಲೆಗಳನ್ನು ತೆರೆಯಲಾಗಿದ್ದು, ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಜುಲೈ 15ರಿಂದಲೇ 12ನೇ ತರಗತಿಗಳು ಆರಂಭವಾಗಿದೆ. ಆದರೆ ವಿದ್ಯಾರ್ಥಿಗಳ ಭೌತಿಕ ಹಾಜರಿ ಕಡ್ಡಾಯವೆಂದು ಸರ್ಕಾರ ಹೇಳಿಲ್ಲ. ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಸಹ ಶೇ.50 ರಷ್ಟು ಸಾಮರ್ಥ್ಯ ಮತ್ತು ಕೋವಿಡ್ ಸುರಕ್ಷತೆ ಮಾರ್ಗಸೂಚಿಗಳೊಂದಿಗೆ ತರಗತಿ ನಡೆಸಲು ಅನುಮತಿ ನೀಡಿದೆ.

ಗುಜರಾತ್ ನಲ್ಲಿ ಇಂದು 34 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಸಾವಿನ ಸಂಖ್ಯೆ ಶೂನ್ಯವಾಗಿದೆ.