ಪ್ಯಾರಿಸ್ : ಆನ್ ಲೈನ್ ನಲ್ಲಿ ಜಾಹೀರಾತುಗಳನ್ನು ಪ್ರಕಟಿಸುವುದಕ್ಕಾಗಿ ತನ್ನ ಮಾರುಕಟ್ಟೆಯನ್ನು ದುರುಪಯೋಗ ಪಡಿಸಿದ್ದಕ್ಕೆ ಅಮೆರಿಕಾದ ಗೂಗಲ್ ಕಂಪನಿಗೆ ಫ್ರಾನ್ಸ್ 220 ದಶಲಕ್ಷ ಯೂರೋ(ಸುಮಾರು1948 ಕೋಟಿ ರೂ.) ದಂಡ ವಿಧಿಸಿದೆ.
ಗೂಗಲ್ ನ ಡೇಟಾ ಮತ್ತು ಕೆಲವು ಸಾಧನಗಳು ದೊಡ್ಡ ಪ್ರಕಾಶಕರಿಗೆ ಬಹುತೇಕ ಅವಶ್ಯಕವಾಗಿದೆ. ಆದರೆ ಗೂಗಲ್ ತನ್ನ ಮಾರುಕಟ್ಟೆಯನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಫ್ರಾನ್ಸ್ ನ ಸ್ಪರ್ಧಾ ನಿಯಂತ್ರಕವು ದಂಡವನ್ನು ವಿಧಿಸಿದ್ದು, ಸದ್ಯ ಗೂಗಲ್ ತನ್ನ ಜಾಹೀರಾತಿನಲ್ಲಿ ಬದಲಾವಣೆ ಮಾಡಲಾಗುವುದು ಎಂದು ತಿಳಿಸಿದೆ.
ಗೂಗಲ್ ಇಂಟರ್ನೆಟ್ ಜಾಹೀರಾತು ಮಾರಾಟವನ್ನು ಏಕಸ್ವಾಮ್ಯಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಮೂರು ಮಾಧ್ಯಮ ಕಂಪನಿಗಳಾದ ನ್ಯೂಸ್ ಕಾರ್ಪೋರೇಷನ್, ಲೆ ಫಿಗರೊ ಮತ್ತು ಬೆಲ್ಜಿಯಂನ ಗ್ರೂಪ್ ರೊಸೆಲ್ ಆರೋಪಿಸಿದ ಹಿನ್ನಲೆ ದಂಡ ವಿಧಿಸಿದೆ.
ಈ ಮೊದಲು ಗೂಗಲ್ ಜಾಹೀರಾತುಗಳು ಬಳಸುವ ವಿಧಾನಗಳು ಅಪಾರದರ್ಶಕವಾಗಿದೆ ಮತ್ತು ಅರ್ಥಮಾಡಿಕೊಳ್ಳುವುದು ಕಷ್ಟವಾಗಿದೆ ಎಂದು ಫ್ರಾನ್ಸ್ ಸ್ಪರ್ಧಾ ನಿಯಂತ್ರಕ 2019ರಲ್ಲಿ 150 ದಶಲಕ್ಷ ಯುರೋ(1,327 ಕೋಟಿ ರೂ.) ದಂಡವನ್ನು ವಿಧಿಸಿತ್ತು.










