ಗೃಹಲಕ್ಷ್ಮಿಯರಿಗೆ ಒಟ್ಟಿಗೆ ಬರುತ್ತಾ 4000 ರೂಪಾಯಿ?.

32

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಚುನಾವಣೆಗೂ ಮುನ್ನ ನೀಡಿದ ಆಶ್ವಾಸನೆಯಂತೆ ಪಂಚ ಗ್ಯಾರಂಟಿಗಳಾದ, ಅನ್ನಭಾಗ್ಯ, ಗೃಹಲಕ್ಷ್ಮಿ, ಯುವನಿಧಿ, ಗೃಹಜ್ಯೋತಿ ಹಾಗೂ ಶಕ್ತಿ ಯೋಜನೆಗಳನ್ನು ಜಾರಿಗೆ ತಂದಿತ್ತು. ಆ ಮೂಲಕ ಸಿಎಂ ಸಿದ್ದರಾಮಯ್ಯ ನೆತೃತ್ವದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದ್ದೇವೆ ಎಂದು ಹೇಳಿಕೊಂಡಿತ್ತು.
ಈ ನಡುವೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಹಣ ಕಳೆದೆರಡು ತಿಂಗಳಿನಿಂದ ಇನ್ನೂ ಕೂಡ ಬಂದಿಲ್ಲ ಎನ್ನುವುದು ಈ ಯೋಜನೆಯ ಫಲಾನುಭವಿಗಳಿಗೆ ಆತಂಕ ಹೆಚ್ಚಿಸಿದೆ. ಹಣ ಯಾವಾಗ ಬರುತ್ತೆ ಎಂದು ಕಾದು ಕುಳಿತಿದ್ದಾರೆ ಗೃಹಲಕ್ಷ್ಮಿಯರು. ಇನ್ನೂ ಈ ತಿಂಗಳು (ಸೆಪ್ಟೆಂಬರ್) ಇನ್ನೇನು ಮುಗಿಯುತ್ತಾ ಬಂದಿದೆ ಈ ತಿಂಗಳಲ್ಲಿ ಹಣ ಬಿಡುಗಡೆಯಾಗುವುದು ಬಹುತೇಕ ಡೌಟ್ ಎನ್ನಲಾಗಿದೆ. ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಹಣಕಾಸು ಇಲಾಖೆಯಿಂದ ಇದುವರೆಗೆ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಆದ್ರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳಕರ್ ಅವರು ಕೂಡಲೇ ಹಣ ರಿಲೀಸ್ ಮಾಡ್ತೇವೆ ಎಂದು ಭರವಸೆ ನೀಡಿದ್ದರು. ಮಾತ್ರವಲ್ಲ ಎರಡು ತಿಂಗಳ ಹಣ ಒಟ್ಟಿಗೆ ರಿಲೀಸ್ ಆಗುತ್ತದೆ ಎಂದು ಅವರೇ ಮಾಹಿತಿ ನೀಡಿದ್ದರು. ಇತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂರು ತಿಂಗಳ ಕಂತಿನ ಹಣವನ್ನು ಬಿಡುಗಡೆ ಮಾಡುವಂತೆ ಹಣಕಾಸು ಇಲಾಖೆಗೆ ಕೇಳಿದೆ ಆದ್ರೆ, ಹಣಕಾಸು ಇಲಾಕೆ ಮಾತ್ರ ಕೇವಲ ಒಂದೊಂದೇ ತಿಂಗಳ ಹಣ ಬಿಡುಗಡೆ ಮಾಡುತ್ತಾ ಬಂದಿದೆ. ಇದೀಗ ಕಳೆದ 2 ತಿಂಗಳ ಹಣ ಬಿಡುಗಡೆಯಾಗಿಲ್ಲ ಇನ್ನೂ ಈ ತಿಂಗಳು ಮುಗಿತಾ ಬಂದಿದೆ ಹಾಗಾಗಿ ಜುಲೈ ಹಾಗೂ ಆಗಸ್ಟ್ ತಿಂಗಳ ಹಣ ಒಟ್ಟಿಗೆ ಬರುವ ಸಾಧ್ಯತೆ ಇಲ್ಲ. ಒಂದು ವೇಳೆ ಹಣ ಬಿಡುಗಡೆಯಾದ್ರೂ ಕೂಡ ಅದು ಅಕ್ಟೋಬರ್ ಮೊದಲ ಅಥವ ಎರಡನೇ ವಾರದಲ್ಲಿ ಗೃಹಲಕ್ಷ್ಮಿಯರ ಅಕೌಂಟ್‍ಗೆ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ. ಪ್ರತೀ ತಿಂಗಳು ರಾಜ್ಯದ ಸುಮಾರು 1.21 ಕೋಟಿ ಗೃಹಲಕ್ಷ್ಮಿಯರಿಗೆ ಹಣ ರಿಲೀಸ್ ಆಗಬೇಕಿದೆ. ಇದಕ್ಕಾಗಿ ಪ್ರತೀ ತಿಂಗಳು 2500 ಕೋಟಿ ಹಣದ ಅಗತ್ಯವಿದೆ. ಸೆಪ್ಟೆಂಬರ್ ತಿಂಗಳನ್ನು ಸೇರಿ ಸುಮಾರು ಮೂರು ತಿಂಗಳಿನಿಂದ ಹಣ ಇನ್ನೂ ಕೂಡ ಬಿಡುಗಡೆಯಾಗಿಲ್ಲ.
ಇನ್ನೊಂದೆಡೆ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಮುಡಾ ಹಗರಣದ ತನಿಖೆಗೆ ರಾಜ್ಯಪಾಲರು ನೀಡಿದ್ದ ಪ್ರಾಸಿಕ್ಯೂಶನ್ ವಿರೋಧಿಸಿ ಸಿದ್ರಾಮಯ್ಯ ಅವರು ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದರು ವಿಚಾರಣೆ ನಡೆಸಿದ ಹೈಕೋರ್ಟ್ ಸಿಎಂ ಅರ್ಜಿಯನ್ನು ವಜಾ ಮಾಡಿ ರಾಜ್ಯಪಾಲರ ಆದೇಶವನ್ನು ಎತ್ತಿ ಹಿಡಿದಿದೆ. ಒಂದು ಕಡೆ ಸಿಎಂಗೆ ಕುರ್ಚಿ ಟೆನ್ಶನ್ ಆಗಿದ್ರೆ ಇನ್ನೊಂದೆಡೆ ಗೃಹಲಕ್ಷ್ಮಿಯರಿಗೆ ತಿಂಗಳಿಗೆ 2 ಸಾವಿರ ಬರುತ್ತಾ ಇಲ್ಲವಾ ಎಂಬ ಟೆನ್ಶನ್ ಶುರುವಾಗಿದೆ.