ಗೋರಕ್ಷಣೆಗಾಗಿ ಪ್ರತಿ ಮನೆಯಲ್ಲಿ ತಲ್ವಾರ್ ಇಟ್ಟುಕೊಳ್ಳಿ – ಸಾಧ್ವಿ ಸರಸ್ವತಿ.

82
firstsuddi

ಉಡುಪಿ : ಗೋರಕ್ಷಣೆಗಾಗಿ ಪ್ರತಿ ಹಿಂದೂಗಳ ಮನೆಯಲ್ಲಿ ತಲ್ವಾರ್ ಇಟ್ಟುಕೊಂಡು ಗೋಮಾತೆಯನ್ನು ರಕ್ಷಿಸುವಂತೆ ಸಾಧ್ವಿ ಸರಸ್ವತಿ ಕರೆ ನೀಡಿದ್ದಾರೆ.

ನಿನ್ನೆ ಕಾರ್ಕಳ ದ ಗಾಂಧಿ ಮೈದಾನದ ಅಮರ ಸೇನಾನಿ ಜನರಲ್ ಬಿಪಿನ್ ರಾವತ್ ವೇದಿಕೆ ಯಲ್ಲಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ಉಡುಪಿ ಇದರ ವತಿಯಿಂದ ಆಯೋಜಿಸಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಸಾಧ್ವಿ ಸರಸ್ವತಿ ದಿಕ್ಸೂಚಿ ಭಾಷಣಕಾರರಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಗೋಕಳ್ಳತನ ನಡೆಯುತ್ತಿದ್ದು, ಗೋರಕ್ಷಣೆಗಾಗಿ ಮನೆಯಲ್ಲಿ ತಲ್ವಾರ್ ಗಳನ್ನು ಇಟ್ಟುಕೊಳ್ಳುವ ಮೂಲಕ ಗೋಮಾತೆಯನ್ನು ರಕ್ಷಿಸಬೇಕು. ಭಾರತೀಯ ಮಕ್ಕಳಿಗೆ ಭಗವದ್ಗೀತೆ ಬೋದಿಸಬೇಕು ಈ ಮೂಲಕ ಮಕ್ಕಳಿಗೆ ಭಾರತೀಯ ಸಂಸ್ಕೃತಿ ಯ ಪಾಠವೇ ಮೊದಲಾಗಬೇಕು ಎಂದರು.

ಕರ್ನಾಟಕದಲ್ಲಿ ಹಿಂದು ಕಾರ್ಯಕರ್ತರ ತ್ಯಾಗವಿದೆಯೋ ಅಲ್ಲಿಯವರೆಗೆ ಹಿಂದೂ ಧರ್ಮ ನಶಿಸಿ ಹೋಗದು , ಟಿಪ್ಪು ಸುಲ್ತಾನ್ ಪೂಜಿಸುವ ಮನಸ್ಸುಗಳಿಗೆ ಧಿಕ್ಕರಿಸಿಬೇಕಾಗಿದ್ದು ಅಯೋದ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಾಗಿದೆ ,ರಾಜ್ಯದಲ್ಲಿ ಪ್ರಖರತೆಯ ಮತಾಂತರ , ಲವ್ ಜಿಹಾದ್ ವಿರುದ್ದ ಮತ್ತು ಗೋರಕ್ಷಣೆಗಾಗಿ ಕಠಿಣ ಕಾನೂನು ತರುವಂತೆ ಸರ್ಕಾರವನ್ನು ಒತ್ತಾಯಿಸಿದರು.