ಗೋ ಬ್ಯಾಕ್ ಅಶೋಕ್ – ಬಿಜೆಪಿಗರಿಂದಲೇ ಸಚಿವರಿಗೆ ತೀವ್ರ ವಿರೋಧ…

61
firstsuddi

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕನಿಷ್ಠ ನಾಲ್ಕೈದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಬಿಜೆಪಿ ನಾಯಕರು ಸ್ಟಾಟರ್ಜಿ ಮಾಡ್ತಾ ಇದ್ದಾರೆ. ಆ ಸ್ಟಾಟರ್ಜಿಯ ಒಂದು ಭಾಗ ಎಂಬಂತೆ ಸಚಿವ ಗೋಪಾಲಯ್ಯ ಅವರಿಗೆ ಕೊಕ್ ನೀಡಿ ಆರ್.ಅಶೋಕ್ ಅವರಿಗೆ ಮಂಡ್ಯ ಉಸ್ತುವಾರಿಯನ್ನು ನೀಡಲಾಗಿದೆ.

ಇದೀಗ ಅಶೋಕ್ ಅವರಿಗೆ ಉಸ್ತುವಾರಿ ಜವಾಬ್ದಾರಿ ನೀಡಿರುವ ಕಾರಣ ಮಂಡ್ಯ ಬಿಜೆಪಿಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಅಶೋಕ್ ಅವರು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ, ಅವರಿಂದ ಮಂಡ್ಯದಲ್ಲಿ ಬಿಜೆಪಿ ಕಟ್ಟಲು ಸಾಧ್ಯವಿಲ್ಲ. ಹೀಗಾಗಿ ಫೇಸ್‍ಬುಕ್ ಹಾಗೂ ರಸ್ತೆಯ ಗೋಡೆಯ ಮೇಲೆ ಅಶೋಕ್ ಗೋ ಬ್ಯಾಕ್, ಬಾಯ್ಕಟ್ ಎಂಬ ಪೋಸ್ಟರ್ ಗಳನ್ನು ಅಂಟಿಸಲಾಗಿದೆ.

ಇಂದು ಅಶೋಕ್ ಅವರು ಮಂಡ್ಯದಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದ್ರು. ಈ ವೇಳೆಯೂ ಸಹ ಬಿಜೆಪಿಯ ಪ್ರಮುಖ ನಾಯಕರು ಕಾಣಿಸಿಕೊಳ್ಳದೇ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಅಶೋಕ್, ನಮ್ಮ ಪಕ್ಷದಲ್ಲಿ ಅಸಮಾಧಾನ ಇಲ್ಲ. ನಾನು ಯಾರೊಂದಿಗೂ ಸಹ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ, ನನ್ನ ವಿರುದ್ಧ ಸುಮ್ಮನೆ ಅಪಪ್ರಚಾರ ಮಾಡಲಾಗುತ್ತಿದೆ. ನಾನು ಬಂದಿರುವುದಕ್ಕೆ ಕೆಲವರಿಗೆ ಭಯ ಬಂದಿದೆ ಹೀಗಾಗಿ ಬೇರೆ ಪಕ್ಷದವರು ಎತ್ತಿ ಕಟ್ಟುತ್ತಿದ್ದಾರೆ ಎನ್ನುವ ಮೂಲಕ ತಮ್ಮ ಮೇಲಿನ ಅಸಮಾಧಾನವನ್ನು ತಳ್ಳಿ ಹಾಕಿದ್ದಾರೆ.