ಗ್ರಾಹಕರಿಗೆ ಇನ್ನಷ್ಟು ಹೊರೆ – ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ…

68
firstsuddi

ನವದೆಹಲಿ : ದೇಶದಲ್ಲಿ ಸತತ ಏಳನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳವಾಗಿದ್ದು, ಪರಿಣಾಮ ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಇಂದು ಕೂಡ ಪೆಟ್ರೋಲ್ ದರದಲ್ಲಿ 30 ಪೈಸೆ ಮತ್ತು ಡೀಸೆಲ್ ಬೆಲೆ 35 ಪೈಸೆ ಏರಿಕೆಯಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 30 ಪೈಸೆ ಏರಿಕೆಯೊಂದಿಗೆ ಲೀಟರ್ ಪೆಟ್ರೋಲ್ ದರ 104.44 ರೂಪಾಯಿ ಹಾಗೂ 35 ಪೈಸೆ ಹೆಚ್ಚಳದೊಂದಿಗೆ ಡೀಸೆಲ್ ದರ 93.17 ರೂಪಾಯಿ ಇದೆ. ಮುಂಬೈನಲ್ಲಿ ಲೀಟರ್ ಪೆಟ್ರೋಲ್ಗೆ 110.41 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 101.03 ರೂಪಾಯಿಗೆ ಏರಿಕೆಯಾಗಿದೆ.

ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ದರ 105.09 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 96.28 ರೂಪಾಯಿಗೆ ಏರಿಕೆ ಆಗಿದೆ. ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 101.81 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 97.61 ರೂಪಾಯಿಗೆ ಏರಿಕೆಯಾಗಿದೆ.ಇನ್ನೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 108.08 ರೂಪಾಯಿ ಇದ್ದು ಡೀಸೆಲ್ 98.89 ರೂಪಾಯಿ ಏರಿಕೆಯಾಗಿದೆ.