ಕೊಯಮತ್ತೂರು : ಚಲಿಸುತ್ತಿರುವ ಕಾರಿನಿಂದ ಪತ್ನಿಯನ್ನು ಹೊರಗೆ ತಳ್ಳಿ ಕೊಲೆ ಮಾಡಲು ಯತ್ನಿಸಿರುವ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ. ಆರತಿ ಎಂಬ ಮಹಿಳೆ ಕಾರಿನಿಂದ ಹೊರ ಬೀಳುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಕಾರಿನಿಂದ ಹೊರಗೆ ತಳ್ಳುತ್ತಿರುವ ವಿಡಿಯೋ ಈಗಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹಿಳೆ ತನ್ನ ಪತಿ ಹಾಗೂ ಕುಟುಂಬದವರು ನನ್ನನ್ನು ಕಾರಿನಿಂದ ಹೊರಗೆ ತಳ್ಳಿ ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದರೆ ಪತಿ ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.