ಚಾಮರಾಜನಗರ ಆಕ್ಸಿಜನ್ ಪ್ರಕರಣ : ಮೈಸೂರು ಜಿಲ್ಲೆಗೆ ಕಳಂಕ ತಂದಿದ್ದಕ್ಕೆ ಜಿಲ್ಲೆಯ ಜನತೆ ಬಳಿ ಕ್ಷಮೆ ಕೇಳಬೇಕು : ಡಿಸಿ ರೋಹಿಣಿ ಸಿಂಧೂರಿ.

168
firstsuddi

ಮೈಸೂರು : ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪದಿಂದ ಮುಕ್ತರಾದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಇದೀಗ ಪ್ರತಿಕ್ರಿಯೆ ನೀಡಿದ್ದು, ನಮ್ಮ ಮೇಲೆ ಆರೋಪ ಮಾಡಲು ಹೋಗಿ ಜಿಲ್ಲೆಗೆ ಕಳಂಕ ತರಲು ಯತ್ನಿಸಿದವರು ಜಿಲ್ಲೆಯ ಜನತೆಯ ಕ್ಷಮೆ ಕೇಳಬೇಕು ಎಂದು ರೋಹಿಣಿ ಸಿಂಧೂರಿ ಅವರು ಹೇಳಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹೈಕೋರ್ಟ್ ನೀಡಿರುವ ವರದಿ ಈಗಾಗಲೇ ಎಲ್ಲಾರಿಗೂ ಗೊತ್ತಾಗಿದೆ. ನಾನು ಮೈಸೂರು ಜಿಲ್ಲಾಧಿಕಾರಿಯಾಗಿ ಬಂದ ದಿನದಿಂದ ಕೆಲವೊಬ್ಬರು ಇಲ್ಲ ಸಲ್ಲದ ಆರೋಪ ಮಾಡುತ್ತಾ ಬಂದಿದ್ದಾರೆ. ಅದಕ್ಕೆ ನಾನು ಪ್ರತಿಕ್ರಿಯೆ ನೀಡಿಲ್ಲ, ಅದು ನನ್ನ ಕೆಲಸವೂ ಅಲ್ಲ. ಕಳೆದ 7 ತಿಂಗಳಿಂದ ನನ್ನ ಮೇಲೆ ವೈಯಕ್ತಿಕವಾಗಿಯೂ ಆರೋಪ ಮಾಡುತ್ತಿದ್ದಾರೆ. ಚಾಮರಾಜನಗರ ಘಟನೆಯಲ್ಲು ಅದನ್ನೇ ಮಾಡಿದ್ದಾರೆ. ಅದರಿಂದ ನಾವು ಮುಕ್ತರಾಗಿದ್ದೇವೆ. ನಾವು ಈ ಹುದ್ದೆಗೆ ಬಂದಿರುವುದು ದೇಶ ಸೇವೆ ಮಾಡಲು. ಸಣ್ಣ ಪುಟ್ಟ ಆರೋಪಗಳನ್ನು ಮಾಡುವ ಶಾಸಕರು, ಮಾಜಿ ಕಾರ್ಪೋರೇಟರ್ ಗೆ ಉತ್ತರ ಕೊಡುವುದಿಲ್ಲ. ಕಾಲ ಎಲ್ಲವನ್ನು ನಿರ್ಧರಿಸಲಿದೆ. ಇದು ಸಾಂಕ್ರಾಮಿಕ ಸಮಯವಾದ ಕಾರಣ ಎಲ್ಲರು ಒಟ್ಟಾಗಿ ಸೇರಿ ಕೆಲಸ ಮಾಡಿದರೆ ಮಾತ್ರ ಜನ ಜೀವ ಉಳಿಸಲು ಸಾಧ್ಯ. ಕಲಬೇಡ, ಕೊಲಬೇಡ ಎಂಬ ಬಸವಣ್ಣನ ವಚನವನ್ನು ಎಲ್ಲರೂ ಮಾರ್ಗಸೂಚಿಯಾಗಿ ಸ್ವೀಕರಿಸಬೇಕು. ಸಂಕಷ್ಟದ ಸಮಯದಲ್ಲಿ ನಾಡ ದೇವತೆ ಚಾಮುಂಡಿ ತಾಯಿ ಎಲ್ಲರಿಗೂ ಸಮೃದ್ಧಿ ನೀಡಲಿ ಎಂದು ಬೇಡಿಕೊಳ್ಳುತ್ತೇನೆ ಎಂದರು.