ಚಾರ್ಮಾಡಿ ಘಾಟ್: ಸಮಾಜ ಸೇವಕ ಹಸನಬ್ಬ ಅವರ ಕಾರ್ ಮೇಲೆ ಬಿದ್ದ ಮರ ಪ್ರಾಣಪಾಯದಿಂದ ಪಾರು

1158

ಮೂಡಿಗೆರೆ : ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು  ಚಾರ್ಮಾಡಿ ಘಾಟ್ ಹತ್ತನೇ ತಿರುವಿನಲ್ಲಿ ಶಿಫ್ಟ್ ಕಾರ್ ಮೇಲೆ ಮರ ಬಿದ್ದಿರುವ ಘಟನೆ ನಡೆದಿದೆ. ಚಾರ್ಮಾಡಿ ಘಾಟ್ ಸಂಚಾರ ಬಂದಾದ ಹಿನ್ನೆಲೆ ಸ್ಥಳಕ್ಕೆ ಬಂದ ಸಮಾಜಸೇವಕ ಹಸನಬ್ಬ ಅವರ ಕಾರ್ ಮೇಲೆ ಮತ್ತೊಂದು ಮರ ಬಿದ್ದಿದ್ದು .ಚಾರ್ಮಾಡಿ ಘಾಟಿಯಲ್ಲಿ ಯಾವುದೇ ಸಮಸ್ಯೆಯಾದರೂ ಮೊದಲು ಬರುವ ವ್ಯಕ್ತಿ ಹಸನಬ್ಬ ಅವರು ಮರ ತೆರವುಗೊಳಿಸಲು ಸ್ಥಳಕ್ಕೆ ಬಂದಿದ್ದ ವೇಳೆ ಮತ್ತೊಂದು ಮರ  ಅವರ ಕಾರ ಮೇಲೆ ಬಿದ್ದಿದ್ದು ಹಸನಬ್ಬ ಅವರು ಪ್ರಾಣಾಪಾಯದಿಂದ ಪಾರಾಗಿದ್ದು ಬೆಳ್ತಂಗಡಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ