ಚಿಕ್ಕಮಗಳೂರು : ನಾಳೆ ಅಖಿಲಾ ಭಾರತ್ ಮುಷ್ಕರ(ಭಾರತ್ ಬಂದ್) ಹಿನ್ನೆಲೆ, ಚಿಕ್ಕಮಗಳೂರಿನಲ್ಲೂ ಕಾರ್ಮಿಕ ಸಂಘಟನೆಗಳು ಹಾಗೂ ವಿವಿಧ ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿದ್ದು, ಎಐಟಿಯುಸಿ, ಐಎನ್ ಟಿಯುಸಿ, ಯುಟಿಯುಸಿ, ಎಲ್.ಐ.ಸಿ ಬ್ಯಾಂಕ್ ಸಂಘಟನೆಗಳು, ರೈತ ಸಂಘ ಸೇರಿ ಹತ್ತಕ್ಕೂ ಹೆಚ್ಚು ಸಂಘಟನೆಗಳ ಬೆಂಬಲ ಸೂಚಿಸಿದ್ದು, ನಾಳೆ ಸಾರಿಗೆ ಸಂಪರ್ಕ ಸಂಪೂರ್ಣ ಸ್ಥಗಿತಗೊಳ್ಳುವ ಸಾಧ್ಯತೆ ಇದ್ದು, ಆರ್ಥಿಕ ನೀತಿ ಮತ್ತು ಕಾರ್ಮಿಕ ಪರ ಕಾನೂನುಗಳ ತಿದ್ದುಪಡಿ, ಬೆಲೆ ಏರಿಕೆ, ಕೈಗಾರಿಕಾ ಸಂಕಷ್ಟ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಬಂದ್ ಗೆ ಕರೆ ನೀಡಿದ್ದು, ಜಿಎಸ್‍ಟಿ ವಿರುದ್ದವೂ ಧ್ವನಿ ಎತ್ತಲಿರುವ ವಿವಿಧ ಸಂಘಟನೆಗಳು ಕನಿಷ್ಠ ವೇತನ ನೀಡುವಂತೆ ಒತ್ತಾಯಿಸಲಿರುವ ಕಾರ್ಮಿಕ ಸಂಘಟನೆಗಳು. ಚಿಕ್ಕಮಗಳೂರಿನಲ್ಲಿ ಯಾವುದೇ ಬಂದ್ ಇರುವುದಿಲ್ಲ. ಬೆಳಿಗ್ಗೆ 11ಗಂಟೆಗೆ ಮೆಸ್ಕಾಂ ಕಚೇರಿಯಿಂದ ಆಜಾದ್ ಪಾರ್ಕ್‍ವರೆಗೂ ಪ್ರತಿಭಟನೆ ನಡೆಸಲಿದ್ದು, ಎಂದಿನಂತೆ ಹೋಟೆಲ್, ಅಂಗಡಿ ಮುಂಗಟ್ಟುಗಳು ಕಾರ್ಯ ನಿರ್ವಹಿಸಲಿದ್ದು, ನಾಳೆ ಬ್ಯಾಂಕ್, ಎಲ್‍ಐಸಿ ಕಚೇರಿ, ಬಿಎಸ್‍ಎನ್‍ಎಲ್ ಕಚೇರಿ ಬಂದ್ ಆಗಲಿದ್ದು, ಪ್ರತಿಭಟನೆಯಲ್ಲಿ ಆಶಾ ಕಾರ್ಯಕರ್ತರು ಭಾಗವಹಿಸುವ ಹಿನ್ನೆಲೆ, ಜಿಲ್ಲೆಯ ಅಂಗನವಾಡಿಗಳು ಬಂದ್ ಆಗಲಿವೆ. ಸಾರಿಗೆ ಬಂದ್ ಬಗ್ಗೆ ಇಂದು ಸಂಜೆ ವೇಳೆಗೆ ತೀರ್ಮಾನವಾಗಲಿದ್ದು, ಈವರೆಗೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಆಗಿಲ್ಲ.










