ಚಿಕ್ಕಮಗಳೂರು:ಕೊರೋನ ಸೋಂಕು ತಡೆಗೆ ದುಬೈನಗರ ಬಡಾವಣೆಗೆ ಸ್ಯಾನಿಟೈಸರ್ ಸಿಂಪಡನೆ…

87

ಚಿಕ್ಕಮಗಳೂರು, : ದಿನೇ ದಿನೇ ಹೆಚ್ಚುತ್ತಿರುವ ಕೊರೊನಾ ಮಹಾಮಾರಿಯ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಮತ್ತು ಉಮ್ಮೀದ್ ಫೌಂಡೇಶನ್ ಇಡೀ ನಗರವನ್ನು ಸ್ಯಾನಿಟೈಸ್ ಮಾಡಲು ಮುಂದಾಗಿವೆ.
ಈ ನಿಟ್ಟಿನಲ್ಲಿ ಇಂದು ಬೆಳಿಗ್ಗೆ ಇಲ್ಲಿನ ದುಬೈನಗರ ಬಡಾವಣೆಗೆ ಟಾಟಾಏಸ್ ವಾಹನದಲ್ಲಿ ಸೋಂಕು ತಡೆಗಟ್ಟುವ ಔಷಧದೊಂದಿಗೆ ಆಗಮಿಸಿದ ಎರಡೂ ಸಂಸ್ಥೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪೌರ ಕಾರ್ಮಿಕರ ವಸತಿ ಸಮುಚ್ಚಯ ಸೇರಿದಂತೆ ಇಡೀ ಬಡಾವಣೆಗೆಯನ್ನು ಸ್ಯಾನಿಟೈಸ್ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಮಹಮದ್ ನಯಾಜ್ ಕೊರೊನಾ ಮಹಾಮಾರಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸ್ಯಾನಿಟೈಸ್ ಮಾಡುವ ಕಾರ್ಯವನ್ನು ಇಂದು ದುಬೈನಗರ ಬಡಾವಣೆಯಲ್ಲಿ ಆರಂಭಿಸಿದ್ದು ನಾಳೆಯಿಂದ ನಗರದ ಎಲ್ಲಾ 35 ವಾರ್ಡ್‍ಗಳಲ್ಲಿ ಹಾಗೂ ಸಾರ್ವಜನಿಕ ಆಸ್ಪತ್ರೆ ಆವರಣವನ್ನು ಸ್ಯಾನಿಟೈಸ್ ಮಾಡಲಾಗುವುದು ಎಂದು ತಿಳಿಸಿದರು.
ಇಡೀ ನಗರವನ್ನು ಸ್ಯಾನಿಟೈಸ್ ಮಾಡುವುದರ ಜೊತೆಗೆ ಕೊರೊನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಅನುಸರಿಸಬೇಕಾದ ಕ್ರಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ರಸೂಲ್‍ಖಾನ್ ಉಮ್ಮೀದ್ ಫೌಂಡೇಶನ್‍ನ ಅಧ್ಯಕ್ಷ ಶಾದಾಬ್ ಅಲಂಖಾನ್, ಜಾವಿದ್, ಅಪ್ಪು, ಶಿಯಾನ್, ಮೊಸಿನ್, ರಿಯಾಜ್ ಹಾಜರಿದ್ದರು.