ಚಿಕ್ಕಮಗಳೂರು : ಅಪಘಾತಕ್ಕೊಳಗಾಗಿ ರಕ್ತದ ಮಡುವಿನಲ್ಲಿ ನರಳಾಡುತ್ತಿದ್ದ ಹಸುವನ್ನು ರಕ್ಷಿಸಿ ಮಾನವೀಯತೆ ಮೆರೆದ ಸ್ಥಳೀಯರು…

305
firstsuddi

ಚಿಕ್ಕಮಗಳೂರು : ಅಪಘಾತಕ್ಕೊಳಗಾಗಿ ರಸ್ತೆಯಲ್ಲಿ ಬಿದ್ದು ರಕ್ತ ಸುರಿಸಿಕೊಂಡು ನರಳಾಡುತ್ತಿದ್ದ ಹಸುವನ್ನು ರಕ್ಷಿಸಿ ಸ್ಥಳೀಯರು ಮಾನವೀಯತೆ ಮೆರೆದಿರುವ ಘಟನೆ ನಗರದ ಬೇಲೂರು ರಸ್ತೆಯಲ್ಲಿ ನಡೆದಿದ್ದು, ರಸ್ತೆ ದಾಟುತ್ತಿದ್ದ ಹಸುವಿಗೆ ಕಾರ್ ಗುದ್ದಿದ ಪರಿಣಾಮ ರಸ್ತೆಯಲ್ಲಿ ರಕ್ತ ಸುರಿಸಿಕೊಂಡು ನರಳಾಡುತ್ತಿದ್ದ ಹಸುವನ್ನು ಕಂಡ ಪ್ರಯಾಣಿಕರು ತಮ್ಮ ವಾಹನಗಳನ್ನು ನಿಲ್ಲಿಸಿ ಮೂಕ ಪ್ರಾಣಿಯ ರಕ್ಷಣೆಗೆ ಧಾವಿಸಿದರು. ನೀರು ಕುಡಿಸಿ ಹಸುವನ್ನು ಎಬ್ಬಿಸುವ ಪ್ರಯತ್ನ ಮಾಡಿದರು ಬೆನ್ನಿನ ಮೂಳೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಹಸು ರಸ್ತೆಯಲ್ಲೇ ಒಂದು ಗಂಟೆಗೂ ಹೆಚ್ಚು ಕಾಲ ನೋವನ್ನು ತಡೆಯಲಾರದೆ ಮೂಕರೋಧನೆ ಅನುಭವಿಸಿದೆ. ಹಸುವಿನ ಮೂಗಿನಲ್ಲಿ ಸುರಿಯುತ್ತಿದ್ದ ರಕ್ತವನ್ನು ಕಂಡ ನೆರೆದಿದ್ದವರು ಪಶುವೈದ್ಯರಿಗೆ ಫೋನಾಯಿಸಿದರು. ಅಪಘಾತವನ್ನ ಮೊಬೈಲ್ ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಶೇರ್ ಮಾಡುವ ಜನರ ಮಧ್ಯೆ ಮೂಕಪ್ರಾಣಿಯ ರಕ್ಷಣೆಗೆ ನಿಂತಿದ್ದು ನಿಜಕ್ಕೂ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.