ಚಿಕ್ಕಮಗಳೂರು : ಆಫ್ ರೋಡ್ ರ್ಯಾಲಿಯಲ್ಲಿ ಡ್ರೈವ್ ಮಾಡುವಾಗ ಸಹ ಚಾಲಕ ಹೃದಯಾಘಾತದಿಂದ ಸಾವು…

2752
firstsuddi

ಚಿಕ್ಕಮಗಳೂರು : ಆಫ್ ರೋಡ್ ರ್ಯಾಲಿಯಲ್ಲಿ ಡ್ರೈವ್ ಮಾಡುವಾಗ ಸಹ ಚಾಲಕ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಜಿಲ್ಲೆಯ ಎನ್.ಆರ್ ಪುರ ತಾಲ್ಲೂಕಿನ ಬಾಳೆಹೊನ್ನೂರಿನಲ್ಲಿ ನಡೆದಿದೆ. ಕಬ್ಬಿನಹಳ್ಳಿ ಅರವಿಂದ್(43) ಮೃತಪಟ್ಟ ಸಹಚಾಲಕ ಎಂದು ಗುರುತಿಸಲಾಗಿದ್ದು, ಬಾಳೆಹೊನ್ನೂರು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಆಫ್ ರೋಡ್ ಜಿಪ್ಸಿ ರ್ಯಾಲಿಯಲ್ಲಿ ಭಾಗಿಯಾಗಿದ್ದ ಅರವಿಂದ್ ಅವರು, ನಾವಿಗೇಟರ್ ಆಗಿ ಜಿಪ್ಸಿಯಲ್ಲಿ ಕೂತಿದ್ದರು. ಈ ವೇಳೆ ಅರವಿಂದ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದು, ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.