ಚಿಕ್ಕಮಗಳೂರು : ಇಂದು ದೇಶದಾಧ್ಯಂತ ವೈದ್ಯರ ಮುಷ್ಕರ, ಚಿಕ್ಕಮಗಳೂರಿನಲ್ಲೂ ವೈದ್ಯರ ಮುಷ್ಕರಕ್ಕೆ ಬೆಂಬಲ…

248
firstsuddi

ಚಿಕ್ಕಮಗಳೂರು : ಇಂದು ದೇಶದಾಧ್ಯಂತ ವೈದ್ಯರ ಮುಷ್ಕರ ಹಿನ್ನೆಲೆ ಚಿಕ್ಕಮಗಳೂರಿನಲ್ಲೂ ವೈದ್ಯರ ಮುಷ್ಕರಕ್ಕೆ ಬೆಂಬಲ ಸೂಚಿಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಓಪಿಡಿ ಸೇವೆಯನ್ನು ಸ್ಥಗಿತಗೊಳಿಸಿದ್ದು, ತುರ್ತು ಚಿಕಿತ್ಸೆ ಮಾತ್ರ ಎಂದಿನಂತೆ ಮುಂದುವರಿಯಲಿದೆ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ರಜೆ ಹಾಕದೇ ಎಂದಿನಂತೆ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಿದ್ದು, ಇಂದು ಮಧ್ಯಾಹ್ನ 12ಗಂಟೆಗೆ ನಗರದ ಗಾಂಧಿ ಪ್ರತಿಮೆ ಬಳಿ ಖಾಸಗಿ ಆಸ್ಪತ್ರೆ ವೈದ್ಯರು ಪ್ರತಿಭಟನೆ ನಡೆಸಿ ಬಳಿಕ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ಮಾಡಿ ಮನವಿಯನ್ನು ಸಲ್ಲಿಸಲಿದ್ದಾರೆ.