ಚಿಕ್ಕಮಗಳೂರು : ಕಳೆದ ಮೂರು ದಿನಗಳಿಂದ ಕಾಫಿನಾಡಲ್ಲಿ ವಾಸ್ತವ್ಯ ಹೂಡಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ…

362
firstsuddi

ಚಿಕ್ಕಮಗಳೂರು : ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕಳೆದ ಮೂರು ದಿನಗಳಿಂದ ಕಾಫಿನಾಡಲ್ಲಿ ವಾಸ್ತವ್ಯ ಹೂಡಿದ್ದು, ರಾಜಕೀಯ ಜಂಜಾಟದಿಂದ ಬೇಸತ್ತು ಕೊಪ್ಪ ತಾಲ್ಲೂಕಿನ ಗುಡ್ಡೇತೋಟದಲ್ಲಿರುವ ತಮ್ಮ ಸ್ನೇಹಿತ ರಂಗನಾಥ್ ಅವರ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಉದ್ಯಮಿ ಸಿದ್ದಾರ್ಥ್ ಅಂತಿಮ ದರ್ಶನಕ್ಕೆ ಬಂದ ಕುಮಾರಸ್ವಾಮಿ ಅವರು ಅಂದಿನಿಂದಲೂ ಜಿಲ್ಲೆಯಲ್ಲಿ ವಾಸ್ತವ್ಯ ಮಾಡಿದ್ದು, ರಾಜಕೀಯ ಜಂಜಾಟದಿಂದ ಬೇಸತ್ತ ಕುಮಾರಸ್ವಾಮಿ ಅವರು ಎಲ್ಲಾ ರಾಜಕೀಯ ಕಾರ್ಯಕ್ರಮವನ್ನು ರದ್ದುಗೊಳಿಸಿ ಮಲೆನಾಡಿನ ಮಳೆ, ಪ್ರಸಕ್ತ, ಪರಿಸರ ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತಿದ್ದು, ಫುಲ್ ರಿಲಾಕ್ಸ್ ಮೂಡ್‍ನಲ್ಲಿ ಇದ್ದಾರೆ ಎನ್ನಲಾಗಿದೆ.