ಚಿಕ್ಕಮಗಳೂರು : ಕಾಂಗ್ರೆಸ್‍ನದ್ದು ದನ ಸತ್ತರೆ ರಣಹದ್ದು ಕಾಯುವ ರೀತಿ ಮನಸ್ಥಿತಿ : ಸಿ.ಟಿ. ರವಿ.

158
firstsuddi

ಚಿಕ್ಕಮಗಳೂರು : ಕಾಂಗ್ರೆಸ್‍ನದ್ದು ದನ ಸತ್ತರೆ ರಣಹದ್ದು ಕಾಯುವ ರೀತಿ ಮನಸ್ಥಿತಿ ಎಂದು ಸಚಿವ ಸಿ.ಟಿ. ರವಿ ಅವರು ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆ.14ರಂದು ಉತ್ತರ ಪ್ರದೇಶದ ಹತ್ರಾಸ್‍ನಲ್ಲಿ ನಡೆದ ಘಟನೆಯನ್ನು ನಾನು ಖಂಡಿಸುತ್ತೇನೆ. ಆದರೆ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣವನ್ನು ರಾಜಕೀಯ ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ. ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಕಾಂಗ್ರೆಸ್‍ನದ್ದು ದನ ಸತ್ತರೆ ರಣಹದ್ದುಗಳು ಕಾಯುವ ರೀತಿ ಮನಸ್ಥಿತಿ. ರಾಹುಲ್ ಗಾಂಧಿ ಅವರು ಸಾಂತ್ವಾನ ಹೇಳುವುದಕ್ಕೆ ಹೊರಟಿರಲಿಲ್ಲ. ಬದಲಾಗಿ ಪ್ರದರ್ಶನ ಮಾಡುವುದಕ್ಕೆ ಹೊರಟಿದ್ದರು. ಪ್ರದರ್ಶನ ಮಾಡುವ ಮೂಲಕ ಸಂತ್ರಸ್ಥ ಕುಟುಂಬಕ್ಕೆ ಸಾಂತ್ವಾವ ಹೇಳುವುದಲ್ಲ ಎಂದು ಕಿಡಿಕಾರಿದರು.