ಚಿಕ್ಕಮಗಳೂರು : ಜಿಂಕೆಯನ್ನು ರಕ್ಷಿಸಿದ ಸಂತವೇರಿ ಗ್ರಾಮಸ್ಥರು…

217
firstsuddi

ಚಿಕ್ಕಮಗಳೂರು : ನೀರು ಕುಡಿಯಲೆಂದು ಕಾಡಿಂದ ನಾಡಿಗೆ ಬಂದು ನಾಯಿಗಳ ಬಾಯಿಗೆ ತುತ್ತಾಗಿದ್ದ ಜಿಂಕೆಯನ್ನು ಗ್ರಾಮಸ್ಥರು ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯ ತರೀಕೆರೆ ತಾಲ್ಲೂಕಿನ ಸಂತವೇರಿ ಗ್ರಾಮದಲ್ಲಿ ನಡೆದಿದೆ. ಜಿಂಕೆಗೆ ಕಚ್ಚಿ ಗಾಯಗೊಳಿಸಿದ್ದ ಏಳೆಂಟು ನಾಯಿಗಳಿಂದ ತಪ್ಪಿಸಿಕೊಳ್ಳಲು ಜಿಂಕೆ ಓಡುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ನಾಯಿಗಳನ್ನು ಓಡಿಸಿ ಜಿಂಕೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು, ನೀರು ಕುಡಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.