ಚಿಕ್ಕಮಗಳೂರು : ಜೆಡಿಎಸ್ ಕ್ಷೇತ್ರವಾರು ಪದಾಧಿಕಾರಿಗಳ ನೇಮಕ.

120
firstsuddi

ಚಿಕ್ಕಮಗಳೂರು : ಜೆಡಿಎಸ್ ಪಕ್ಷವನ್ನು ಬಲಿಷ್ಟಗೊಳಿಸಲು ಹಾಗೂ ಮುಂಬರುವ ವಿಧಾನಸಭೆ ಚುನಾವಣೆಯನ್ನು ಎದುರಿಸುವ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಜಿಲ್ಲಾ, ಕ್ಷೇತ್ರ ಸಮಿತಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಪದಾಧಿಕಾರಿಗಳನ್ನು ಉಸ್ತುವಾರಿಯಾಗಿ ನೇಮಕ ಮಾಡಿ ಆದೇಶಿಸಲಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ರಂಜನ್ ಅಜಿತ್‍ಕುಮಾರ್ ಹೇಳಿದರು.

ನಗರದ ಜೆಡಿಎಸ್ ಕಛೇರಿಯಲ್ಲಿ ಇಂದು ನಡೆದ ಸಭೆಯಲ್ಲಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ಮೇಲುಸ್ತುವಾರಿಯಾಗಿ ಜಿ.ಎಸ್.ಚಂದ್ರಪ್ಪ, ಕಸಬಾ ಮತ್ತು ಜಾಗರ ಹೋಬಳಿಗೆ ಕೆ.ಎಸ್.ಜಯಕುಮಾರ್, ಈಶ್ವರೇಗೌಡ, ಐ.ಡಿ.ಚಂದ್ರಶೇಖರ್, ಸೀರಜ್ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

ಲಕ್ಯಾ ಮತ್ತು ಸಖರಾಯಪಟ್ಟಣಕ್ಕೆ ಡಿ.ಕೆ.ಚಂದ್ರೇಗೌಡ, ಮಲ್ಲೇದೇವಿರಪ್ಪ, ಆನಂದನಾಯ್ಕ, ಎಂ.ಶಂಕರಪ್ಪ, ಚಿಕ್ಕಮಗಳೂರು ತಾಲ್ಲೂಕು ಉಸ್ತುವಾರಿಯಾಗಿ ದೇವಿಪ್ರಸಾದ್, ಸಿ.ಕೆ.ಮೂರ್ತಿ, ಚಿದಾನಂದ್, ಎ.ಸಿ.ಕುಮಾರಗೌಡ, ಗೋಪಿ, ಇರ್ಷಾದ್ ಅಹ್ಮದ್, ಬಿ.ಆರ್.ದಿನೇಶ್, ಜಯಂತಿ ಅವರನ್ನು ನೇಮಿಸಲಾಗಿದೆ.

ಮೂಡಿಗೆರೆ ಹಾಗೂ ಕಳಸ ಕ್ಷೇತ್ರಕ್ಕೆ ಹೆಚ್.ಎಸ್.ಮಂಜಪ್ಪ, ಹುಣಸೇಮಕ್ಕಿ ಲಕ್ಷ್ಮಣ್, ಜ್ವಾಲನಯ್ಯ, ಸಂತೋಷ್, ರವಿರೈ, ಮಂಜಪ್ಪಯ್ಯ, ಮೂಡಿಗೆರೆ ಬ್ಲಾಕ್‍ಗೆ ಹೊಲದಗದ್ದೆ ಗಿರೀಶ್, ಮಾನು ಮಿರಾಂಡ, ನಿಸ್ಸಾರ್ ಅಹಮದ್, ಹೆಚ್.ಬಿ.ದೇವರಾಜ್, ಲಕ್ಷ್ಮಣಗೌಡ, ಲೋಹಿತ್, ಆಲ್ದೂರು ಬ್ಲಾಕ್‍ಗೆ ಜಿ.ಯು.ರಘು, ಟಿ.ಆರ್.ಲಕ್ಷ್ಮಣಗೌಡ, ಪದ್ಮಯ್ಯ, ಡಿ.ಎಂ.ಪ್ರವೀಣ್ ಅವರನ್ನು ಆಯ್ಕೆ ಮಾಡಲಾಗಿದೆ.

ಶೃಂಗೇರಿ ಕ್ಷೇತ್ರಕ್ಕೆ ಜ್ಯೋತಿ ವಿಠಲ್, ನಿಡುವಾಳೆ ಚಂದ್ರು, ಹೆಚ್.ಜಿ.ವೆಂಕಟೇಶ್, ಸಿ.ಹೆಚ್. ಪ್ರೇಮ್‍ಕುಮಾರ್, ಬಿ.ಪಿ.ನಾಗರಾಜ್, ತರೀಕೆರೆ ಕ್ಷೇತ್ರಕ್ಕೆ ಆರ್.ದೇವಿಪ್ರಸಾದ್, ಬೆನಕರವಿ, ಜಾಕೀರ್ ಹುಸೇನ್, ಶಿವಾನಂದ ಅಜ್ಜಂಪುರ, ಮಂಜುನಾಥ್ ಹಾಗೂ ಕಡೂರು ಕ್ಷೇತ್ರಕ್ಕೆ ಜಿ.ಎಸ್.ಚಂದ್ರಪ್ಪ, ಭಂಡಾರಿ ಶ್ರೀನಿವಾಸ್, ಕೆ.ಎಂ.ಮಹೇಶ್ವರಪ್ಪ, ಬಿ.ಟಿ.ಗಂಗಾಧರನಾಯ್ಕ, ಜಗದೀಶ್ ಅವರನ್ನು ನೇಮಕ ಮಾಡಿ ಮುಂಬರುವ ವಿಧಾನಸಭೆಯಲ್ಲಿ ಪ್ರತಿಯೊಬ್ಬರು ಸಕ್ರಿಯವಾಗಿ ಕಾರ್ಯನಿರ್ವಹಿಸುವ ಮೂಲಕ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದು ರಂಜನ್ ಅಜಿತ್‍ಕುಮಾರ್ ಹೇಳಿದರು.