ಚಿಕ್ಕಮಗಳೂರು : ಡಿವೈಡರ್ ಗೆ ಪಿಕಪ್ ವಾಹನ ಡಿಕ್ಕಿ, ಓರ್ವ ಸಾವು, ಮತ್ತೋರ್ವನ ಸ್ಥಿತಿ ಗಂಭೀರ…

324
firstsuddi

ಚಿಕ್ಕಮಗಳೂರು : ಡಿವೈಡರ್ ಗೆ ಪಿಕಪ್ ವಾಹನ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಮೃತಪಟ್ಟು, ಮತ್ತೋರ್ವನಿಗೆ ಗಂಭೀರ ಗಾಯವಾಗಿರುವ ಘಟನೆ ಜಿಲ್ಲೆಯ ತರೀಕೆರೆ ತಾಲ್ಲೂಕಿನ ಕುಡ್ಲೂರು ಬಳಿ ನಡೆದಿದೆ. ಮಹಮದ್ ಅಲಿ (22) ಮೃತ ದುರ್ದೈವಿ ಎನ್ನಲಾಗಿದ್ದು, ಪಿಕಪ್ ವಾಹನ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಕಬ್ಬಿಣದ ಡಿವೈಡರ್ ಪಿಕಪ್ ನ ಮುಂದೆ ಹೋಗಿ ಹಿಂದೆ ಬಂದಿದ್ದು, ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋರ್ವನಿಗೆ ಗಂಭೀರ ಗಾಯವಾಗಿದೆ. ಗಾಯಾಳುವನ್ನು ತರೀಕೆರೆ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಘಟನಾ ಸ್ಥಳಕ್ಕೆ ಬೀರೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.