ಚಿಕ್ಕಮಗಳೂರು : ದಂಪತಿಯನ್ನು ಮಚ್ಚಿನಿಂದ ಕೊಚ್ಚಿ ಬರ್ಬರ ಹತ್ಯೆ…

308
firstsuddi

ಚಿಕ್ಕಮಗಳೂರು : ಪತಿ ಹಾಗೂ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಎನ್.ಆರ್. ಪುರ ತಾಲ್ಲೂಕಿನ ಸಾತ್ಕೋಳಿ ಗ್ರಾಮದಲ್ಲಿ ನಡೆದಿದೆ. ಧರ್ಮಯ್ಯ(40) ಹಾಗೂ ಪತ್ನಿ ಭಾರತಿ(28) ಕೊಲೆಯಾದ ದಂಪತಿ ಎನ್ನಲಾಗಿದ್ದು, ವಿವಾಹಿತೆ ಭಾರತಿ ಹಾಗೂ ಕೃತ್ಯ ಎಸಗಿದ ಗೋವಿಂದನ ನಡುವೆ ಹಲವು ವರ್ಷಗಳಿಂದ ಅನೈತಿಕ ಸಂಬಂಧವಿದ್ದು, ಆದರೆ ಈಗಾ ನನ್ನನ್ನು ಕಡೆಗಣಿಸುತ್ತಿದ್ದಾಳೆ. ತನ್ನಿಂದ ದೂರವಾಗಿದ್ದನ್ನು ಸಹಿಸಲಾಗದೆ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದು, ಈ ಹಿಂದೆ ಗೋವಿಂದ ಹಾಗೂ ಧರ್ಮಯ್ಯ ಅವರ ಮಧ್ಯೆ ಜಗಳವಾಗಿದ್ದು, ಆ ವೇಳೆ ಧರ್ಮಯ್ಯನನ್ನು ಹತ್ಯೆ ಮಾಡಲು ಮಚ್ಚಿನಿಂದ ಕಡಿಯಲು ಮುಂದಾದಾಗ ಪತ್ನಿ ಭಾರತಿ ಅಡ್ಡವಾಗಿ ನಿಂತು ಪತಿಯನ್ನು ರಕ್ಷಿಸಿದಳು. ಮಚ್ಚಿನ ಹೊಡೆತ ಬೆನ್ನಿಗೆ ತಗುಳಿದ್ದು, ಆಗಾ ಅದೃಷ್ಟಾವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ. ಮತ್ತೆ ಪ್ರೇಯಸಿಯನ್ನು ಭೇಟಿಯಾಗಲು ಶನಿವಾರ ಆಕೆಯ ಮನೆಗೆ ಬಂದ ಸಂದರ್ಭ ದಂಪತಿಗಳು ಗೋವಿಂದನಿಗೆ ಹೊಡೆದಿದ್ದು, ಕೋಪಗೊಂಡ ಗೋವಿಂದ ಇಬ್ಬರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಎನ್.ಆರ್. ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.