ಚಿಕ್ಕಮಗಳೂರು : ಪ್ರಕೃತಿಯ ವೈಶಿಷ್ಟ್ಯಕ್ಕೆ ಸಾಕ್ಷಿಯಾದ ಕಾಫಿ ನಾಡಿನಲ್ಲಿ ಈಗಾ ನಾಲ್ಕು ಕಾಲಿನ ಕೋಳಿ ನಗರದ ಮಲ್ಲಂದೂರು ರಸ್ತೆಯ ಇಕ್ಬಾಲ್ ತಾಜ್ ಸ್ಟಾಲ್‍ನಲ್ಲಿ ಪತ್ತೆಯಾಗಿದ್ದು, ಟೆಂಡರ್ ಚಿಕನ್‍ನಿಂದ ಬಂದ ಕೋಳಿ ಬಾಕ್ಸ್ ನಲ್ಲಿ ನಾಲ್ಕು ಕಾಲಿನ ಕೋಳಿ ಕಂಡ ಮಾಲೀಕ ಇಕ್ಬಾಲ್ ಆಶ್ಚರ್ಯಗೊಂಡಿದ್ದು, ಈ ರೀತಿಯ ಕೋಳಿಯನ್ನು ನಾನೆಂದು ನೋಡಿಲ್ಲ. ನಾಲ್ಕು ಕಾಲಿನ ಪ್ರಾಣಿಯನ್ನು ನಾವೆಲ್ಲಾ ನೋಡಿದ್ದೇವೆ. ಆದರೆ ಈ ತರಹದ ಕೋಳಿಯನ್ನು ನೋಡಿದ್ದು ಮೊದಲು ಎಂದಿದ್ದಾರೆ. ಕೋಳಿಯನ್ನು ಕಂಡ ಸ್ಥಳೀಯರು ಹಾಗೂ ಗ್ರಾಹಕರು ಬೆರಗಾಗಿದ್ದಾರೆ.









