ಚಿಕ್ಕಮಗಳೂರು : ದೇವಸ್ಥಾನಕ್ಕೆ ಹೋದ ವೃದ್ಧೆ ಕೊಲೆ…

512
firstsuddi

ಚಿಕ್ಕಮಗಳೂರು : ದೇವಸ್ಥಾನಕ್ಕೆ ಹೋಗಿದ್ದ ವೃದ್ಧೆಯನ್ನು ಹತ್ಯೆ ಮಾಡಿ ಚಿನ್ನದ ಸರ ಕಿತ್ತುಕೊಂಡು ಹೋಗಿರುವ ಘಟನೆ ಜಿಲ್ಲೆಯ ಅಜ್ಜಂಪುರದ ಶಿವಾನಂದಾಶ್ರಮದ ಬಳಿ ನಡೆದಿದೆ. ನಾಗರತ್ನ(70) ಮೃತ ವೃದ್ಧೆ ಎಂದು ಗುರುತಿಸಲಾಗಿದೆ. ವೃದ್ಧೆಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿ ಸರ ಕಸಿದುಕೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದು, ಸ್ಥಳಕ್ಕೆ ಅಡಿಷನಲ್ ಎಸ್‍ಪಿ ಶೃತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.